ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಚಾಲಕರಿಗೆ ಪೊಲೀಸರು ಬ್ರೀಥಲೈಸರ್ ಪರೀಕ್ಷೆಗಳನ್ನು ಪುನಾರಾರಂಭಿಸಿದ ನಂತರ, ಕುಡಿದು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದ 90 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ದೆಹಲಿಯಲ್ಲಿ ಕುಡಿದು ವಾಹನ ಚಲಾಯಿಸುವ ಬ್ರೀಥಲೈಸರ್ ಪರೀಕ್ಷೆಗಳನ್ನು ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಒಂದು ವರ್ಷದ ನಂತರ ಪುನರಾರಂಭಿಸಲಾಯಿತು.
ಶನಿವಾರ ಮತ್ತು ಭಾನುವಾರ ಕನಿಷ್ಠ 90 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೊರೋನಾ ಕಾರಣದಿಂದಾಗಿ ಬ್ರೀಥಲೈಸರ್ ಉಪಯೋಗಿಸುವಾಗ ಪ್ರತಿ ಬಾರಿಯೂ ಹೊಸದನ್ನು ಅಳವಡಿಸಿ ಉಸಿರಾಡುವ ಕೊಳವೆಗಳಿಗೆ ವಿಲೇವಾರಿ ಪೈಪ್ ಗಳನ್ನು ಬಳಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮರುಪಾವತಿ ಮೊತ್ತದಲ್ಲಿ ಏರ್ ಇಂಡಿಯಾದಿಂದ ಇನ್ನೂ 250 ಕೋಟಿ ರೂಪಾಯಿ ಬಾಕಿ
ರೆಸ್ಟೋರೆಂಟ್, ಬಾರ್, ಪಬ್ ಗಳಿಗೆ ಅನುಮತಿ ನೀಡಿರುವುದರಿಂದ ಜನರು ಪಾರ್ಟಿ ಮಾಡುತ್ತಿದ್ದಾರೆ. ಹೀಗಾಗಿ ಕುಡಿದು ವಾಹನ ಚಲಾಯಿಸುವುದನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಪರೀಕ್ಷೆಗಳನ್ನು ಪುನರಾರಂಭಿಸಲಾಗಿದೆ ಎನ್ನಲಾಗಿದೆ.