alex Certify BREAKING: ನೀಟ್​ ಪರೀಕ್ಷೆ ಮುಂದೂಡಲು ʼಸುಪ್ರೀಂʼ ಕೋರ್ಟ್ ನಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ನೀಟ್​ ಪರೀಕ್ಷೆ ಮುಂದೂಡಲು ʼಸುಪ್ರೀಂʼ ಕೋರ್ಟ್ ನಕಾರ

ಸುಪ್ರೀಂ ಕೋರ್ಟ್​ ಸಿಬಿಎಸ್​ಇ ಅಂಕ ಸುಧಾರಣೆ ಹಾಗೂ ವಿಭಾಗೀಯ ಪರೀಕ್ಷಾ ಕಾರ್ಯಕ್ರಮ ಮತ್ತು ಸೆಪ್ಟೆಂಬರ್​ 12ರಂದು ನಡೆಯಲಿರುವ ನೀಟ್​​ ಪರೀಕ್ಷೆಯ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಅರ್ಜಿಗಳ ಸಂಬಂಧ ವಿಚಾರಣೆ ನಡೆಸಿದೆ. ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ನೀಟ್​ ಪರೀಕ್ಷೆಯನ್ನು ಸ್ಥಗಿತಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

ಮೊದಲು ನೀಟ್​ ಪರೀಕ್ಷೆಯನ್ನು ಏಪ್ರಿಲ್​ ತಿಂಗಳಲ್ಲಿ ನಡೆಸಲು ಪ್ಲಾನ್​ ಮಾಡಲಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಪರೀಕ್ಷೆ ಸ್ಥಗಿತಗೊಂಡಿತ್ತು.

ಜುಲೈ 12ರಂದು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್​ ಟ್ವೀಟ್​ ಮಾಡಿದ್ದು – ನೀಟ್​ ಪರೀಕ್ಷೆಯನ್ನು ಸೆಪ್ಟೆಂಬರ್​ 12ರಂದು ನಡೆಸಲಾಗುತ್ತದೆ ಕೋವಿಡ್​ 19 ಮಾರ್ಗಸೂಚಿಗಳನ್ನು ಪಾಲಿಸಿ ಈ ಪರೀಕ್ಷೆಯನ್ನು ಆಯೋಜಿಸುತ್ತೇವೆ ಎಂದು ಮಾಹಿತಿ ನೀಡಿದ್ದರು.

ನೀಟ್​ ಯುಜಿ ಪರೀಕ್ಷೆ ಇದೇ ಮೊದಲ ಬಾರಿಗೆ 13 ಭಾಷೆಗಳಲ್ಲಿ ನಡೆಯಲಿದೆ. ಪಂಜಾಬಿ ಹಾಗೂ ಮಲಯಾಳಿ ಭಾಷೆಯನ್ನೂ ಈ ಬಾರಿ ಸೇರಿಸಲಾಗಿದೆ. ಅದೇ ರೀತಿ ಪಶ್ವಿಮ ಏಷ್ಯಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುವೈತ್​ನಲ್ಲೂ ನೀಟ್​ ಹೊಸ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.  ನೀಟ್​​ ಪರೀಕ್ಷೆಯು ಹಿಂದಿ, ಪಂಜಾಬಿ, ಅಸ್ಸಾಮಿ, ಬಂಗಾಳಿ, ಓಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲಯಾಳಂ, ಕನ್ನಡ, ತಮಿಳು , ಉರ್ದು ಹಾಗೂ ಇಂಗ್ಲೀಷ್​ ಭಾಷೆಯಲ್ಲಿ ನಡೆಯಲಿದೆ.

ಕೊರೊನಾ ಸೋಂಕಿನ ಭಯ ಇರುವ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ 155 ನಗರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ 198 ನಗರಗಳಲ್ಲಿ ನಡೆಯಲಿದೆ.  ಕಳೆದ ವರ್ಷ ನೀಟ್​ ಯುಜಿ ಪರೀಕ್ಷೆಯು 3862 ಕೇಂದ್ರಗಳಲ್ಲಿ ನಡೆದಿತ್ತು.

ಕೇಂದ್ರ ಶಿಕ್ಷಣ ಮಂತ್ರಿ ಪ್ರಧಾನ್​ ನೀಡಿರುವ ಮಾಹಿತಿಯ ಪ್ರಕಾರ ಕೋವಿಡ್​ 19 ಮಾರ್ಗಸೂಚಿಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಮಾಸ್ಕ್​ ವ್ಯವಸ್ಥೆ ಮಾಡಲಾಗುತ್ತದೆ. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸೇಷನ್​​ ಕಡ್ಡಾಯವಾಗಿ ಇರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...