ಸದ್ಯ ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಚಿತ್ರ ನಿರ್ಮಾಪಕಿ ಫರಾ ಖಾನ್, ನಟಿ ದೀಪಿಕಾ ಪಡುಕೋಣೆ ಜೊತೆಗೆ ’ಕೌನ್ ಬನೇಗಾ ಕರೋಡ್ಪತಿ’ಯ ವಿಶೇಷ ಸಂಚಿಕೆಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಚಿಕೆಯ ಶೂಟಿಂಗ್ ಅನ್ನು ಫರಾಗೆ ಕೋವಿಡ್ ತಗುಲುವ ಮುನ್ನವೇ ಶೂಟ್ ಮಾಡಲಾಗಿದೆ.
ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮದ ಸೆಟ್ನಲ್ಲಿ ಹೋಸ್ಟ್ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಫರಾ ಇನ್ಸ್ಟಾಗ್ರಾಂನ ತಮ್ಮ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ರೆಟ್ರೋ ಜೆರ್ಸಿಯಲ್ಲಿ ಧೋನಿ ಮಿಂಚಿಂಗ್
ಈ ಸಂಚಿಕೆಯ ಶೂಟಿಂಗ್ ದಿನದಂದು ಸೆಟ್ನಲ್ಲಿದ್ದ ಎಲ್ಲರೂ ಕೊರೋನಾ ವೈರಸ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದು ಫರಾ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
“ನನಗೆ ಸೋಂಕು ಹೇಗೆ ತಗುಲಿತು ಎಂಬುದೇ ಅರ್ಥವಾಗುತ್ತಿಲ್ಲ. ಎರಡು ಚುಚ್ಚುಮದ್ದುಗಳನ್ನು ಪಡೆದೂ, ಎರಡೂ ಚುಚ್ಚುಮದ್ದುಗಳನ್ನು ಪಡೆದ ಮಂದಿಯ ನಡುವೆಯೇ ಕೆಲಸ ಮಾಡುತ್ತಾ ಇದ್ದರೂ ನನಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ” ಎಂದು ಫರಾ ಈ ಹಿಂದೆ ಪೋಸ್ಟ್ ಮಾಡಿದ್ದರು.
ಫರಾಗೆ ಸೋಂಕು ತಗುಲಿದ ಕಾರಣ ’ಝೀ ಕಾಮಿಡಿ ಶೋ’ನಲ್ಲಿ ಅವರ ಬದಲಿಗೆ ಗಾಯಕ ಮಿಕಾ ಸಿಂಗ್ರನ್ನು ಹೊಸ ಜಡ್ಜ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.
https://www.instagram.com/p/CTbZSD2oC-Z/?utm_source=ig_embed&ig_rid=ef3dc46e-5846-48da-adb7-91176802babe