ವಾಟ್ಸಾಪ್ ಬಳಕೆದಾರರ ಖಾಸಗಿ ಸಂದೇಶಗಳು ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸಾಪ್ ಇಮೇಜ್ ಫಿಲ್ಟರ್ ಒಂದನ್ನು ಸೈಬರ್ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಈ ಬಗ್ ಅನ್ನು ವಾಟ್ಸಾಪ್ ಸದ್ಯಕ್ಕೆ ಸರಿಪಡಿಸಿದೆ.
ಚೆಕ್ ಪಾಯಿಂಟ್ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಅನುವಾಗುತ್ತಿದ್ದ ಈ ದೋಷವನ್ನು ವಾಟ್ಸಾಪ್ ಸರಿಪಡಿಸಿದೆ. ಈ ಲೋಪದ ಮೂಲಕ, ಹ್ಯಾಕರ್‌ಗಳು ಇಮೇಜ್‌ಗಳನ್ನು ವಾಟ್ಸಾಪ್ ಸಂದೇಶಗಳ ಹರಿವಿನಲ್ಲಿ ತೇಲಿಸಿ, ಅವುಗಳ ಮೂಲಕ ಬಳಕೆದಾರರ ಫೋನ್‌ನಲ್ಲಿರುವ ಸೂಕ್ಷ್ಮ ಮಾಹಿತಿಗಳನ್ನು ಓದಲು ಸಾಧ್ಯವಾಗುತ್ತಿತ್ತು.
BIG NEWS: ಮತ್ತೆ ಅಪ್ಪಳಿಸಿದ ನಿಫಾ ವೈರಸ್; 12 ವರ್ಷದ ಬಾಲಕ ಬಲಿ
ತಮಗೆ ಬಂದ ಈ ಇಮೇಜ್‌ಗೆ ಬಳಕೆದಾರರು ವಾಟ್ಸಾಪ್ ಫಿಲ್ಟರ್ ಬಳಸಿದಲ್ಲಿ, ಆ ಮೂಲಕ ವಾಟ್ಸಾಪ್ ಮೆಮೊರಿಗೆ ಆಕ್ಸೆಸ್ ಪಡೆಯುತ್ತಿದ್ದರು ಎಂದು ಸಂಶೋಧಕರಾದ ಡಿಕ್ಲಾ ಬರ್ಡಾ ಹಾಗೂ ಗಾಲ್ ಎಲ್‌ಬಾಜ಼್ ತಿಳಿಸಿದ್ದಾರೆ.
ವಿಶೇಷವಾಗಿ ಕ್ರಾಫ್ಟ್ ಮಾಡಲಾದ ಈ ಇಮೇಜ್‌ಗೆ ನಿರ್ದಿಷ್ಟ ಫಿಲ್ಟರ್‌ಗಳನ್ನು ಅಳವಡಿಸಿ, ಹೊಸ ಚಿತ್ರವನ್ನು ಸೆಂಡ್ ಮಾಡಿದಾಗ ಬಳಕೆದಾರರ ವಾಟ್ಸಾಪ್ ಪ್ರೊಫೈಲ್‌ನ ಆಕ್ಸೆಸ್ ಹ್ಯಾಕರ್‌ಗಳಿಗೆ ಸಿಗಬಹುದಾದ ಈ ದೋಷವನ್ನು ಆಂಡ್ರಾಯ್ಡ್‌ನ v2.21.1.13ಗೂ ಮುಂಚಿನ ವರ್ಶನ್‌ಗಳಲ್ಲಿ ಇದ್ದಿದ್ದಾಗಿ ವಾಟ್ಸಾಪ್ ತಿಳಿಸಿದೆ.
ಈ ಭದ್ರತಾ ಲೋಪವನ್ನು ವಾಟ್ಸಾಪ್‌ಗೆ ನವೆಂಬರ್ 10, 2020ರಂದು ತೋರಿದ್ದಾಗಿ ಸೈಬರ್ ಸೆಕ್ಯೂರಿಟಿ ಸಂಸ್ಥೆ ತಿಳಿಸಿದೆ.