alex Certify ರಾಜ್ಯದಲ್ಲಿ ಇಂದಿನಿಂದ 6 -8 ನೇ ತರಗತಿ ಆರಂಭ – 1 -5 ನೇ ಕ್ಲಾಸ್ ಕೂಡ ಶೀಘ್ರವೇ ಆರಂಭ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಇಂದಿನಿಂದ 6 -8 ನೇ ತರಗತಿ ಆರಂಭ – 1 -5 ನೇ ಕ್ಲಾಸ್ ಕೂಡ ಶೀಘ್ರವೇ ಆರಂಭ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ 6,7,8 ನೇ ತರಗತಿ ಆರಂಭವಾಗಲಿವೆ. ಕೋವಿಡ್ ನಿಯಮ ಪಾಲಿಸಿ ಇಂದಿನಿಂದ ಶಾಲೆಗಳನ್ನು ಆರಂಭಿಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗೆ ತರಗತಿ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ತರಗತಿ ಶುಚಿಗೊಳಿಸಲು ಅವಕಾಶ ನೀಡಲಾಗಿದೆ.

ಆರಂಭದಲ್ಲಿ 9 ರಿಂದ 12 ನೇ ತರಗತಿ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಇದರೊಂದಿಗೆ ಇಂದಿನಿಂದ 6 ರಿಂದ 8 ನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು. ಮಾರ್ಗಸೂಚಿಗಳನ್ವಯ ತರಗತಿ ನಡೆಸಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ 6 ರಿಂದ 12 ನೇ ತರಗತಿ ಆರಂಭವಾದಂತಾಗಲಿದ್ದು, ಶೀಘ್ರವೇ 1 -5 ನೇ ತರಗತಿಯನ್ನು ಕೂಡ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...