ನವದೆಹಲಿ: ‘ಮದ್ರಾಸ್ ಕೆಫೆ’ ಚಿತ್ರ ಖ್ಯಾತಿಯ ಮಲಯಾಳಂ ನಟಿಯನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ಇತ್ತೀಚೆಗೆ ಬಂಧಿಸಿದೆ.
ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸುಲಿಗೆ ಪ್ರಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. ಚಲನಚಿತ್ರ ನಟಿ ಲೀನಾ ಪೌಲ್ 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಪತಿ ಸುಕೇಶ್ ಜೊತೆ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಈ ಸುಲಿಗೆ ಪ್ರಕರಣದಲ್ಲಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.