ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮಕ್ಕಳಿಗೆ ಒಳ್ಳೆ ಭವಿಷ್ಯ ನೀಡಬೇಕಾಗಿದ್ದು ಶಿಕ್ಷಕರ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು-ಮಕ್ಕಳ ಸಂಬಂಧ ಬದಲಾಗ್ತಿದೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ ನಾಚಿಕೆಗೇಡಿ ಕೆಲಸ ಮಾಡಿದ್ದಾಳೆ. 39 ವರ್ಷದ ವಿವಾಹಿತ ಶಿಕ್ಷಕಿ, ಟ್ಯೂಷನ್ ಗೆ ಬರ್ತಿದ್ದ 14 ವರ್ಷದ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿದ್ದಾಳೆ.
ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. 39 ವರ್ಷದ ಶಿಕ್ಷಕಿ ಕ್ರಿಸ್ಟಲ್ ಜಾಕ್ಸನ್ ಕೃತ್ಯವೆಸಗಿದ್ದಾಳೆ. ಮೌಂಟೇನ್ ವ್ಯೂ ಇಂಡಿಪೆಂಡೆಂಟ್ ಶಾಲೆಯಲ್ಲಿ ಆಕೆ ಶಿಕ್ಷಕಿಯಂತೆ. ಇದಲ್ಲದೆ ಮಕ್ಕಳಿಗೆ ಟ್ಯೂಷನ್ ಹೇಳ್ತಿದ್ದಳು ಎನ್ನಲಾಗಿದೆ. 14 ವರ್ಷದ ಹುಡುಗನ ಮೇಲೆ ಕ್ರಿಸ್ಟಲ್ ಜಾಕ್ಸನ್ ಗೆ ಕಣ್ಣು ಬಿದ್ದಿದೆ. ಶಿಕ್ಷಕಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪಾಲಕರು ದೂರು ದಾಖಲಿಸಿದ ನಂತ್ರ ಒಂದು ವರ್ಷಗಳ ಕಾಲ ವಿಚಾರಣೆ ನಡೆದಿದೆ. ಶಿಕ್ಷಕಿ 3 ಬಾರಿ ಅತ್ಯಾಚಾರವೆಸಗಿದ್ದಾಳೆಂಬುದು ಬಹಿರಂಗವಾಗಿದೆ. ಆದ್ರೆ ಶಿಕ್ಷಕಿಗೆ ಜಾಮೀನು ನೀಡಲಾಗಿದೆ. ಪೋಲಿಸ್ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ. ಇಂಥ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.