ಇಂಡೋನೇಷ್ಯಾದ ಬಾಲಿ ದ್ವೀಪವು ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಇಲ್ಲಿರುವ ಕೋತಿಗಳಿಗೆ ಪ್ರವಾಸಿಗರಿಂದ ಯಥೇಚ್ಛವಾಗಿ ಆಹಾರ ಕೂಡ ಸಿಗ್ತಾ ಇತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದ ಕಾರಣ ಪ್ರವಾಸಿಗರಿಗೆ ದ್ವೀಪಕ್ಕೆ ಭೇಟಿ ನೀಡಲಾಗುತ್ತಿಲ್ಲ.
ಇದರಿಂದ ಕೋತಿಗಳಿಗೆ ಕೂಡ ಆಹಾರ ಸಿಗದೆ ಕಂಗೆಟ್ಟಿದ್ದು, ತಮ್ಮ ಹೊಟ್ಟೆತುಂಬಿಸಿಕೊಳ್ಳಲು ಗ್ರಾಮಕ್ಕೆ ಲಗ್ಗೆಯಿಡುತ್ತಿವೆ. ಹೌದು, ಆಹಾರ ಹುಡುಕಿಕೊಂಡು ಬರುವ ಕೋತಿಗಳು ದ್ವೀಪದ ಗ್ರಾಮಸ್ಥರ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಗ್ರಾಮಸ್ಥರು ಭೀತಿಯಿಂದಲೇ ಕಾಲ ಕಳೆಯುವಂತಾಗಿದೆ. ಹೀಗಾಗಿ ಏನು ಮಾಡುವುದು ಎಂದು ಚಿಂತಾಕ್ರಾಂತರಾದ ಗ್ರಾಮಸ್ಥರು, ಬಳಿಕ ತಾವೇ ಸ್ವತಃ ಹಣ್ಣು, ಕಡಲೇಕಾಯಿ ಹಾಗೂ ಇತರೆ ಆಹಾರಗಳನ್ನು ಹಿಡಿದುಕೊಂಡು ಅಭಯಾರಣ್ಯದತ್ತ ಹೊರಡಲು ಶುರು ಮಾಡಿದ್ದಾರೆ.
BIG NEWS: ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಗಳು ಅನ್ವಯ; ಹೊಸ ಗೈಡ್ ಲೈನ್ ಪ್ರಕಟ
ಅಭಯಾರಣ್ಯವು ಹಲವು ಗ್ರಾಮಗಳಿಗೆ ಹತ್ತಿರದಲ್ಲಿದ್ದು, ಸುಮಾರು 600 ಕಪಿಗಳು ವಾಸಿಸುತ್ತಿವೆ ಎನ್ನಲಾಗಿದೆ. ಹಸಿದ ಕೋತಿಗಳು ಏನು ಮಾಡೋಕು ಹಿಂಜರಿಯುವುದಿಲ್ಲ ಎಂಬ ಬಗ್ಗೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಾಂಕ್ರಮಿಕಕ್ಕೆ ಒಂದು ತಿಂಗಳು ಮೊದಲು ಸಾಂಗ್ಹ್ ಮಂಕಿ ಅಭಯಾರಣ್ಯಕ್ಕೆ ಸುಮಾರು 6,000 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, ಈ ವರ್ಷ ಜುಲೈನಲ್ಲಿ ದೇಶವು ಬಾಲಿಗೆ ಬರುವ ಎಲ್ಲಾ ವಿದೇಶಿ ಪ್ರಯಾಣಿಕರನ್ನು ನಿಷೇಧಿಸಿತು. ಇದರಿಂದ ಕೋತಿಗಳಿಗೆ ಆಹಾರ ಸಿಗದೆ ಅವು ಗ್ರಾಮಗಳತ್ತ ಲಗ್ಗೆಯಿಡುತ್ತಿವೆ.