ವಿದ್ಯಾರ್ಥಿ ವೇತನದಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಣ ಹೇಗೆ ಉಳಿಸಬಹುದೆಂದು ಇಲ್ಲೊಬ್ಬ ಹೇಳಿಕೊಟ್ಟಿದ್ದಾನೆ. ಇಪ್ಪತೈದು ವರ್ಷದ ಜೋರ್ಡನ್ ವಿಡಾಲ್ ಎಂಬುವನು ಹಣ ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದರ ಬಗ್ಗೆ ಗೊತ್ತಿಲ್ಲದೇ ಇರಬಹುದು, ಆದರೆ ಹಣ ಹೇಗೆ ಉಳಿಸುವುದು ಎಂದು ತಿಳಿಸಿಕೊಡುವಲ್ಲಿ ಸಫಲನಾಗಿದ್ದಾನೆ. ಇವನನ್ನು ನೆಟ್ಟಿಗರು ಹಣ ಉಳಿಸುವ ಹೀರೊ ಎಂದು ಕರೆಯುತ್ತಾರೆ.
ಜೋರ್ಡನ್ ಕಳೆದ ಎರಡು ವರ್ಷದಿಂದ ತನ್ನ ಬುದ್ಧಿವಂತಿಕೆಯಿಂದ ತಾನು ಸೇವಿಸುವ ಆಹಾರಕ್ಕೆ ಹಣ ಖರ್ಚು ಮಾಡದೆ, ಸಾವಿರಾರು ಡಾಲರ್ ಉಳಿಸಿದ್ದಾನೆ. ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಈತ, ಸಾಕಷ್ಟು ರೀತಿಯ ಬುದ್ದಿವಂತಿಕೆಯಿಂದ ಹಣ ಉಳಿಸಿದ್ದಾನೆ.
ನಗುವಿಗೆ ಕಾರಣವಾಗಿದೆ ಸಂದರ್ಶಕಿ ಕೇಳಿರುವ ಪ್ರಶ್ನೆ…!
ಅರೆಕಾಲಿಕ ಕೆಲಸದಿಂದ ಬರುತ್ತಿದ್ದ ಸಂಬಳ ತನ್ನ ಓದಿಗೆ ಸಾಕಾಗುತ್ತಿರಲಿಲ್ಲ, ಇದನ್ನು ಮನಗಂಡು ಈತ ಹಲವು ರೀತಿಯ ಬುದ್ಧಿವಂತಿಕೆ ತೋರಿಸಿ ಹಣ ಉಳಿಸಿದ್ದಾನೆ. ಇದರಲ್ಲಿ ಈತ ಯಾವುದೇ ಕಾನೂನು ಬಾಹಿರ ಕೆಲಸ ಮಾಡುತ್ತಿರಲಿಲ್ಲ. ತಾನು ತಿನ್ನುವ ಆಹಾರಕ್ಕೆ ಹಣ ಖರ್ಚು ಮಾಡದೆ, ಹೊಟ್ಟೆ ತುಂಬಿಸಿಕೊಂಡಿದ್ದಾನೆ.
ಮೊದಲು ಕ್ಯಾಸಿನೊ ಸದಸ್ಯರಿಗೆ ವಾರದಲ್ಲಿ ಒಮ್ಮೆ ಉಚಿತ ಆಹಾರ ಕೊಡುವುದರ ಬಗ್ಗೆ ತಿಳಿದುಕೊಂಡು, ಕ್ಯಾಸಿನೊ ಒಂದರಲ್ಲಿ ಸದಸ್ಯನಾದ. ಪ್ರತಿ ಸೋಮವಾರ ಬೆಳಗ್ಗೆ ಬೇಗ ಎದ್ದು ಅಲ್ಲಿ ಆತ ಎಷ್ಟು ತಿನ್ನುತ್ತಿದ್ದ ಎಂದರೆ, ಮರುದಿನ ಬೆಳಗ್ಗಿನವರೆಗೆ ಹಸಿವಾಗುತ್ತಿರಲಿಲ್ಲ. ಮಿಕ್ಕೆಲ್ಲ ದಿನಗಳು, ಹೋಟೆಲ್ ಮುಚ್ಚುವ ವೇಳೆಗೆ ಉಳಿದಿರುತ್ತಿದ್ದ ಆಹಾರಗಳನ್ನು ಕೇಳಿ ಪಡೆಯುತ್ತಿದ್ದ. ಇದಕ್ಕೆ ಕಾರಣ, ಅಲ್ಲಿನ ಹೋಟೆಲ್ ಸಿಬ್ಬಂದಿ ಅಥವಾ ಮಾಲೀಕರ ಸ್ನೇಹ ಮಾಡಿಕೊಂಡಿದ್ದ. ಇದೇ ಕಾರಣದಿಂದ ಆತನ ರೂಮಿನ ಫ್ರಿಡ್ಜ್ ತುಂಬಾ ಯಾವಾಗಲೂ ಆಹಾರ ಇದ್ದೆ ಇರುತ್ತಿತ್ತು. ಈತ ಪದವೀಧರ ಆಗುವಷ್ಟರಲ್ಲಿ ಸುಮಾರು ಮೂರೂ ಸಾವಿರ ಡಾಲರ್ ಉಳಿಸಿದ್ದು ಗಮನಾರ್ಹ ಸಂಗತಿ.