ಚಾಮರಾಜನಗರ: ಬ್ಯಾಂಕ್ ಗಳ ದರೋಡೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.
ಹನೂರಿನ ಅಭಿಷೇಕ್ (26), ಶ್ರೀನಿವಾಸ್ (27), ಮುತ್ತುಸ್ವಾಮಿ (26), ಮಲ್ಲೇಶ್ (26) ಬಂಧಿತ ಆರೋಪಿಗಳು. ಬಂಧಿತರಿಂದ ಬ್ಯಾಂಕ್ ಕಂಪ್ಯೂಟರ್ ಮಾನಿಟರ್, ಸಿಸಿ ಟಿವಿ ಡಿವಿಆರ್, ಎರಡು ಬೈಕ್, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಚ್ಚಿಬೀಳಿಸುವಂತಿದೆ 21 ರ ಯುವತಿ ಮಾಡಿದ್ದ ಖತರ್ನಾಕ್ ಪ್ಲಾನ್
ಬ್ಯಾಂಕ್ ದರೋಡೆಗೆ ಹೊಂಚು ಹಾಕಿದ್ದ ಈ ಖದೀಮರ ತಂಡವನ್ನು 17 ಜನ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಕೊಳ್ಳೆಗಾಲ-ಬೆಂಗಳೂರು ಹೆದ್ದಾರಿಯಲ್ಲಿ ಬಂಧಿಸಿದೆ. ಓರ್ವ ಆರೋಪಿ ಪರಾರಿಯಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.