ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಚಿತ್ರವಿಚಿತ್ರ ಆಸಕ್ತಿಗಳು ಇರುತ್ತವೆ. ಕೆಲವು ಮಂದಿ ತಮ್ಮ ಬಯಕೆಗಳು ಅದೆಷ್ಟೇ ವಿಚಿತ್ರವಾಗಿದ್ದರೂ ಅವುಗಳನ್ನು ತೀರಿಸಿಕೊಳ್ಳಲು ಭಾರೀ ಪ್ರಯತ್ನ ಪಡುತ್ತಾರೆ.
ಬಾರ್ಬಿ ಗೊಂಬೆಯಂತೆ ಕಾಣಬೇಕೆಂಬ ಹುಚ್ಚು ಹಿಡಿಸಿಕೊಂಡಿದ್ದ ಆಸ್ಟ್ರಿಯಾದ ಮಹಿಳೆಯೊಬ್ಬರು ತಮ್ಮ ಕನಸನ್ನು ಪೂರೈಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.
ಜೆಸ್ಸಿ ಬನ್ನಿ ಹೆಸರಿನ ಈ ಮಹಿಳೆ ಜರ್ಮನಿಯ ಗ್ರಾಮಾಂತರ ಪ್ರದೇಶದಲ್ಲಿ ಜನಿಸಿದ್ದು, ಬಾಲ್ಯದಿಂದಲೇ ವಿಪರೀತ ಮೇಕಪ್ ಹಾಗೂ ಲಿಪ್‌ಸ್ಟಿಕ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ.
2019ರಲ್ಲಿ ತನ್ನ ಶಾಲಾ ಶಿಕ್ಷಣ ಮುಗಿಸುತ್ತಲೇ ಆಸ್ಟ್ರಿಯಾಗೆ ಸ್ಥಳಾಂತರವಾಗಲು ನಿರ್ಧರಿಸಿದ ಜೆಸ್ಸಿ, ಆ ವೇಳೆ ತಮ್ಮ ಹೊಸ ಲುಕ್ ಗಾಗಿ ಸ್ತನಗಳನ್ನು ಹಿಗ್ಗಿಸಿಕೊಳ್ಳುವ ಸರ್ಜರಿಗೆಂದು ಆರು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಕಷ್ಟಕಾಲದಲ್ಲಿ ಬಳಕೆ ಮಾಡಲೆಂದು ತನ್ನ ಹೆತ್ತವರು ಕೂಡಿಟ್ಟಿದ್ದ ದುಡ್ಡನ್ನು ಹೀಗೆ ಕಳೆದಿದ್ದಾಳೆ ಈ ಪುಣ್ಯಾತ್ಗಿತ್ತಿ.
ಗೊಂಬೆಗೆ ಅಂಟಿಸಲು ನೋಟಿನ ಮೇಲಿದ್ದ ರಾಣಿಯ ಮುಖ ಕತ್ತರಿಸಿದ ಬಾಲಕಿ….!
ಇದಾದ ಮೇಲೆ ತಾನು ಬಿಂಬೋ ಬಾರ್ಬಿ ಬೊಂಬೆಯಂತೆ ಕಾಣಬೇಕೆಂದುಕೊಂಡ ಜೆಸ್ಸಿ, “ಅತಿ ದೊಡ್ಡ ತುಟಿಗಳು, ಸ್ತನಗಳು ಹಾಗೂ ಪೃಷ್ಟಭಾಗದಿಂದ ನನ್ನ ದೇಹವನ್ನು ಬಾರ್ಬಿ ಗೊಂಬೆಯಂತೆ ಕಾಣುವಂತೆ ಮಾಡಲು ಇಚ್ಛಿಸುತ್ತೇನೆ” ಎನ್ನುವ ಈಕೆ ತಾನು ಇಷ್ಟೆಲ್ಲಾ ದುಡ್ಡನ್ನು ಹೀಗೆ ಪ್ಲಾಸ್ಟಿಕ್ ಸರ್ಜರಿ ಮೇಲೆ ಖರ್ಚು ಮಾಡುತ್ತಿರುವುದಕ್ಕೆ ಯಾವುದೇ ವಿಷಾದವಿಲ್ಲ.
ಸ್ತನಗಳ ಹಿಗ್ಗುವಿಕೆಗೆ ಆರು ಲಕ್ಷ ರೂಪಾಯಿ ಖರ್ಚು ಮಾಡಿದ್ದಲ್ಲದೇ, ಬೊಟೋಕ್ಸ್‌ಗೆ 1.5 ಲಕ್ಷ ರೂ., ಗಲ್ಲ ಹಾಗೂ ಕೆನ್ನೆಗಳ ಮೇಲೆ ಎರಡು ಲಕ್ಷ ರೂಪಾಯಿ, ಲೈಪೋಸಕ್ಷನ್‌ಗಾಗಿ ಎರಡು ಲಕ್ಷ ರೂಪಾಯಿ ವ್ಯಯಿಸಿದ್ದಾಳೆ ಜೆಸ್ಸಿ. ನೋಡಲು ಬಿಂಬೋ ಬಾರ್ಬಿ ಬೊಂಬೆಯಂತೆ ಕಾಣುವ ಜೆಸ್ಸಿ, ಇದೀಗ ವಯಸ್ಕರ ಜಾಲತಾಣಗಳಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದಾಳೆ.