ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಡೀಲಕ್ಸ್ ಎಸಿ ರೈಲುಗಳಲ್ಲಿ ’ಶ್ರೀ ರಾಮಾಯಣ ಯಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಭಾರತ ಸರ್ಕಾರದ ’ದೇಖೋ ಅಪ್ನಾ ದೇಶ್’ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಭಾರತೀಯ ರೈಲ್ವೇ ನವೆಂಬರ್ 7ರಿಂದ ಮೊದಲ ಯಾತ್ರೆಗೆ ಚಾಲನೆ ನೀಡಲಿದೆ.
17 ದಿನಗಳ ಅವಧಿಗೆ ಇರಲಿರುವ ಈ ಯಾತ್ರೆಯು ಒಟ್ಟಾರೆ 7,500 ಕಿಮೀ ಹಾದು ಬರಲಿದೆ. ಶ್ರೀರಾಮಚಂದ್ರರ ಜೀವನಕ್ಕೆ ಸಂಬಂಧಿಸಿದ ಮಹತ್ವದ ತಾಣಗಳನ್ನೆಲ್ಲಾ ಈ ಯಾತ್ರೆ ವೇಳೆ ಹಾದು ಬರಲಾಗುವುದು.
ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ಕೊಟ್ಟ ಯೋಗಿ ಸರ್ಕಾರ
ಯಾತ್ರೆಯ ಮೊದಲ ನಿಲುಗಡೆ ಅಯೋಧ್ಯೆ ಆಗಿದ್ದು, ಶ್ರೀ ರಾಮ ಜನ್ಮಭೂಮಿ, ಹನುಮಂತ ಮಂದಿರ ಹಾಗೂ ನಂದಿ ಗ್ರಾಮದಲ್ಲಿರುವ ಭರತ್ ಮಂದಿರದ ದರ್ಶನವಾಗಲಿದೆ.
ಇದಾದ ಬಳಿಕ ಸೀತಾ ಮಾತೆಯ ಜನ್ಮಸ್ಥಳವಾದ ಸೀತಾಮರ್ಹಿಗೆ ಯಾತ್ರೆ ಸಾಗಲಿದ್ದು, ಬಳಿಕ ರಸ್ತೆ ಮೂಲಕ ನೇಪಾಳದ ಜನಕ್ಪುರದ ರಾಮ್-ಜಾನಕಿ ಮಂದಿರವನ್ನು ಸಂದರ್ಶಿಸಲಿದೆ.
ಬಳಿಕ ವಾರಣಾಸಿ, ಪ್ರಯಾಗ್ಮ ಶ್ರಿಂಗ್‌ವೆರ್ಪುರ್, ಚಿತ್ರಕೂಟಗಳನ್ನು ಹಾಯ್ದು ಬರಲಾಗುವುದು.
ಮುಂದಿನ ನಿಲುಗಡೆ ನಾಶಿಕ್‌ನಲ್ಲಿದ್ದು, ಹಂಪಿ, ರಾಮೇಶ್ವರಂಗಳನ್ನೂ ಕೊನೆಯ ಹಂತದಲ್ಲಿ ತಲುಪಲಾಗುವುದು. ಇದಾದ ಬಳಿಕ ಯಾತ್ರೆಯ 17ನೇ ದಿನವಾಗಿ ರೈಲು ದೆಹಲಿಗೆ ಮರಳಲಿದೆ.
ಈ ಪ್ಯಾಕೇಜ್‌ನ ಟಿಕೆಟ್ ಬೆಲೆಯು 82,950 ರೂ.ಗಳಿರಲಿವೆ. ಪ್ಯಾಕೇಜ್ ವೆಚ್ಚದಲ್ಲಿ ಎಸಿ ದರ್ಜೆಯ ಪ್ರಯಾಣ, ಎಸಿ ಹೊಟೇಲ್‌ಗಳಲ್ಲಿ ವಸತಿ, ಎಲ್ಲಾ ಊಟ, ತಾಣಗಳ ಸಂದರ್ಶನ, ಎಸಿ-ವಾಹನಗಳಲ್ಲಿ ಸ್ಥಳೀಯ ಪ್ರಯಾಣ, ಪ್ರಯಾಣದ ವಿಮೆ ಹಾಗೂ ಐಆರ್‌ಸಿಟಿಸಿ ಮ್ಯಾನೇಜರ್‌ಗಳ ಸೇವೆಗಳ ಶುಲ್ಕಗಳು ಸೇರಿಕೊಂಡಿವೆ.