alex Certify ಗಣೇಶ ಚತುರ್ಥಿ: ಪರಿಸರ ಸ್ನೇಹಿ ಮೂರ್ತಿ ನಿರ್ಮಾಣಕ್ಕೆ ಮುಂದಾದ ಕೈದಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶ ಚತುರ್ಥಿ: ಪರಿಸರ ಸ್ನೇಹಿ ಮೂರ್ತಿ ನಿರ್ಮಾಣಕ್ಕೆ ಮುಂದಾದ ಕೈದಿಗಳು..!

ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗಿದೆ.

ಪಿಒಪಿ ಗಣಪತಿಗಳು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲವಾದ್ದರಿಂದ ಬಹುತೇಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳತ್ತ ಮನಸ್ಸು ಮಾಡುತ್ತಿದ್ದಾರೆ. ಈ ವರ್ಷವೂ ಕೋವಿಡ್​ 19 ಕರಿ ನೆರಳು ಇರೋದ್ರಿಂದ ಹಬ್ಬದ ಸಂಭ್ರಮಾಚರಣೆಗೆ ಬ್ರೇಕ್​ ಬೀಳುವ ಸಾಧ್ಯತೆ ಇದೆ. ಈ ನಡುವೆ ನಾಸಿಕ್​ ಕೇಂದ್ರ ಕಾರಾಗೃಹದ ಕೈದಿಗಳು ಗಣೇಶ ಚತುರ್ಥಿ ಹಿನ್ನೆಲೆ 2000ಕ್ಕೂ ಅಧಿಕ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುವ ಗುರಿ ಹೊಂದಿದ್ದಾರೆ.

ಗಣೇಶ ಮೂರ್ತಿಯನ್ನು ತಯಾರಿಸುವ ಮುನ್ನ ಕೈದಿಗಳಿಗೆ ಸಾಗರ್​ ಪವಾರ್​ ಎಂಬವರು ಸೂಕ್ತ ತರಬೇತಿ ನೀಡಿದ್ದಾರೆ. 35 ವರ್ಷದ ಪವಾರ್​ ರಾಯಗಢದಲ್ಲಿ ಗಣೇಶ ಮೂರ್ತಿ ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ನಾಸಿಕ್​ ಸೂಪರಿಟೆಂಡೆಂಟ್​​ ಪ್ರಮೋದ್​ ವಾಘ್​ ಈ ವಿಚಾರವಾಗಿ ಮಾತನಾಡಿದ್ದು, ಪ್ರತಿ ವರ್ಷ ಕೈದಿಗಳು 600 -700 ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುತ್ತಾರೆ ಎಂದು ಹೇಳಿದ್ರು.

ಇನ್ನು ಈ ವಿಚಾರವಾಗಿ ಮಾತನಾಡಿದ ನಾಸಿಕ್​ ಜೈಲಿನ ಜೈಲರ್​ ರಾಜಕುಮಾರ್​ ಸಾಲಿ, ಪವಾರ್​​ 16 ಮಂದಿ ಕೈದಿಗಳಿಗೆ 20 ಬಗೆಯ ಗಣೇಶ ವಿಗ್ರಹ ತಯಾರಿಸಲು ತರಬೇತಿ ನೀಡಿದ್ದಾರೆ. ಈ ಗಣಪತಿ ವಿಗ್ರಹಕ್ಕೆ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ಆದರೆ ಮಾರುಕಟ್ಟೆ ದರಕ್ಕಿಂತ ಈ ವಿಗ್ರಹಗಳ ಬೆಲೆ ಕಡಿಮೆ ಇರಲಿದೆ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...