ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ. ದೇಶದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಲ್ಲಿ ಪ್ರತಿಕಾಯ ಉತ್ಪತ್ತಿಯಾಗಿಲ್ಲ. ಇದ್ರಿಂದ ಆತಂಕಗೊಂಡಿರುವ ಜನರು, ಮತ್ತೊಂದು ಲಸಿಕೆ ಹಾಕಿಸಿಕೊಳ್ಳುಬೇಕಾ ಎಂಬ ಪ್ರಶ್ನೆ ಇಡುತ್ತಿದ್ದಾರೆ.
ಸಾಮಾನ್ಯವಾಗಿ ಲಸಿಕೆಯ ಪರಿಣಾಮ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಲಸಿಕೆ ಪಡೆದ ನಂತರವೂ ಕೆಲವರಲ್ಲಿ ಪ್ರತಿಕಾಯಗಳು ಕಂಡುಬಂದಿಲ್ಲ. ಜೋಧಪುರ ಮೂಲದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕ ಡಾ. ಅರುಣ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರತಿಕಾಯ ಉತ್ಪತ್ತಿ ಆಗಿಲ್ಲ ಎಂಬ ಕಾರಣಕ್ಕೆ ಮತ್ತೊಂದು ಲಸಿಕೆ ಪಡೆಯಬೇಕಾಗಿಲ್ಲ. ಮೊದಲು ಲಸಿಕೆ ತೆಗೆದುಕೊಂಡ ನಂತರ ಪ್ರತಿಕಾಯ ಯಾಕೆ ಉತ್ಪತ್ತಿಯಾಗಿಲ್ಲ ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಂದವರು ಹೇಳಿದ್ದಾರೆ. ದೇಹದಲ್ಲಿ ಯಾವ ಸಮಸ್ಯೆಯಿದೆ ಎಂಬುದನ್ನು ಪತ್ತೆ ಮಾಡಬೇಕಾಗುತ್ತದೆ. ಇದಕ್ಕಾಗಿ, ಇಮ್ಯುನೊಲೊಜಿಸ್ಟ್ ಸಂಪರ್ಕಿಸಬೇಕು. ನಂತ್ರ ರೋಗಶಾಸ್ತ್ರಜ್ಞರಿಂದ ಸಂಪೂರ್ಣ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.