ನೆಚ್ಚಿನ ಗಾಯಕನ ಕಾರ್ಯಕ್ರಮಕ್ಕೆ ಹಾಜರಾಗಲು ಈ ಶಿಕ್ಷಕಿ ಪಡುತ್ತಿರುವ ಹರಸಾಹಸ ಕೇಳಿದ್ರೆ ದಂಗಾಗ್ತೀರಾ..! 04-09-2021 8:08PM IST / No Comments / Posted In: Featured News, Live News, Entertainment ಕೊರೊನಾ ವೈರಸ್ನಿಂದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಜೀವನ ಕೂಡ ನಿಧಾನವಾಗಿ ಸಹಜ ಸ್ಥಿತಿಯತ್ತ ವಾಲುವ ನಿರೀಕ್ಷೆ ಇದೆ. ಈಗಾಗಲೇ ಕೊರೊನಾ ಮಾರ್ಗಸೂಚಿಗಳ ನಡುವೇ ಕ್ರೀಡಾಕೂಟಗಳು ಆರಂಭಗೊಂಡಿವೆ, ರೆಸ್ಟೋರೆಂಟ್, ಚಿತ್ರಮಂದಿರಗಳು ತೆರೆದುಕೊಂಡಿವೆ. ಸಂಗೀತ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದಾದರೆ ಲಾಸ್ ವೆಗಾಸ್ನಲ್ಲಿ ಪ್ರಖ್ಯಾತ ಗಾಯಕ ಹಾಗೂ ಗೀತ ರಚನೆಕಾರ ಹ್ಯಾರಿ ಸ್ಟೈಲ್ಸ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ವಿಶ್ವಾದ್ಯಂತ ಹ್ಯಾರಿ ಅಭಿಮಾನಿಗಳು ಈ ಅದ್ಭುತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಕಾತುರದಿಂದ ಕಾಯ್ತಿದ್ದಾರೆ. ಆದರೆ ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಹ್ಯಾರಿ ಕಾರ್ಯಕ್ರಮಕ್ಕೆ ಆಗಮಿಸುವ ತಮ್ಮ ಅಭಿಮಾನಿಗಳು ಕೊರೊನಾ ಲಸಿಕೆ ಪಡೆದಿರಬೇಕು, ಕಾರ್ಯಕ್ರಮಕ್ಕೆ ಆಗಮಿಸುವವರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶಾಲಾ ಶಿಕ್ಷಕಿಯೊಬ್ಬರು ಕಾರ್ಯಕ್ರಮಕ್ಕೆ ದಿನ ಸಮೀಪಿಸುತ್ತಿರುವುದರ ನಡುವೆಯೇ ಯಾವುದೇ ಕಾರಣಕ್ಕೂ ತಾವು ಕೊರೊನಾ ಸೋಂಕಿಗೆ ಒಳಗಾಗಬಾರದು ಎಂದು ಎಚ್ಚರಿಕೆ ವಹಿಸುತ್ತಿದ್ದಾರೆ, ಹೀಗಾಗಿ ವಿದ್ಯಾರ್ಥಿಗಳಿಗೂ ಸಾಮಾಜಿಕ ಅಂತರ ಕಾಪಾಡುವಂತೆ ಹೇಳಿಕೊಟ್ಟಿದ್ದಾರೆ. ಕಾರ್ಯಕ್ರಮದ ಆರಂಭಕ್ಕೆ ದಿನ ಎಣಿಸುತ್ತಿರುವ ಶಿಕ್ಷಕಿಯು ತರಗತಿಯಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆ ನೀಡಿದ್ದಾರೆ. ನಿಮ್ಮಲ್ಲಿ ಯಾರಿಗಾದರೂ ಯಾವುದೇ ರೀತಿಯ ಅನಾರೋಗ್ಯವಿದ್ದರೆ ದಯಮಾಡಿ ಅಂತರ ಕಾಯ್ದುಕೊಳ್ಳಿ. ನನಗೆ ಕಾಯಿಲೆಗೆ ಒಳಗಾಗಲು ಇಷ್ಟವಿಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ. ಟಿಕ್ಟಾಕ್ನಲ್ಲಿ ಈ ವಿಡಿಯೋಗಳು ವೈರಲ್ ಆಗಿದೆ.