ಕಾಬೂಲ್: ಅಫ್ಘಾನಿಸ್ತಾನದಲ್ಲಿನ ಜನರ ಪರಿಸ್ಥಿತಿ ದಿನೇದಿನೇ ಶೋಚನೀಯವಾಗ್ತಿದೆ. ಸಂಭ್ರಮಾಚರಣೆಯ ವೇಳೆ ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ 17 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ತಾಲಿಬಾನ್ ವಿರೋಧಿ ಹೋರಾಟಗಾರರ ನಿಯಂತ್ರಣದಲ್ಲಿರುವ ಪಂಜಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರೂ ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ತಾಲಿಬಾನ್ ಗೆ ಸಾಧ್ಯವಾಗಿಲ್ಲ. ಇದೀಗ ಕಣಿವೆಯನ್ನು ತಾಲಿಬಾನ್ ಹೋರಾಟಗಾರರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಭ್ರಮಾಚರಣೆ ವೇಳೆ ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿದೆ.
ʼಹಸು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕಮಾತ್ರ ಪ್ರಾಣಿʼ
“ನಾವು ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತೇವೆ. ತೊಂದರೆಗೀಡಾದವರನ್ನು ಸೋಲಿಸಲಾಗಿದೆ ಹಾಗೂ ಪಂಜಶೀರ್ ಈಗ ನಮ್ಮ ಆಜ್ಞೆಯಲ್ಲಿದೆ” ಎಂದು ತಾಲಿಬಾನ್ ಕಮಾಂಡರ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಕಣಿವೆಯಲ್ಲಿ ಭಾರಿ ಹೋರಾಟ ಮುಂದುವರೆದಿದ್ದು, ನೂರಾರು ಜನರು ಸತ್ತಿರುವುದಾಗಿ ವರದಿಯಾಗಿದೆ. ಆದರೆ ಪಂಜಶೀರ್ ಪ್ರಾಂತ್ಯ ತಾಲಿಬಾನ್ ವಶದಲ್ಲಿದೆ ಎಂಬುದು ಕೇವಲ ವದಂತಿ ಎಂದು ಬಂಡುಕೋರರು ತಿಳಿಸಿದ್ದಾರೆ.