alex Certify ಪಿಎಫ್ ಬಡ್ಡಿ ಮೇಲೆ ತೆರಿಗೆ: ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಫ್ ಬಡ್ಡಿ ಮೇಲೆ ತೆರಿಗೆ: ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಭವಿಷ್ಯ ನಿಧಿಯ ಮೇಲಿನ ಕಾರ್ಮಿಕರ ಹೂಡಿಕೆಯ ಮೇಲಿನ ಬಡ್ಡಿಯ ಮೇಲೂ ತೆರಿಗೆ ವಿಧಿಸುವ ಲೆಕ್ಕಾಚಾರದ ವಿಧಾನಗಳನ್ನು ವಿತ್ತ ಸಚಿವಾಲಯ ಪ್ರಕಟಿಸಿದೆ. ವಾರ್ಷಿಕ 2.5 ಲಕ್ಷ ರೂ. ಗಿಂತ ಹೆಚ್ಚಿನ ಪಿಎಫ್ ಹೂಡಿಕೆ ಮಾಡುವ ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ.

ಉದ್ಯೋಗಿಗಳು ಹಾಗೂ ಉದ್ಯೋಗದಾತರು ಸೇರಿ ಒಟ್ಟಾರೆ 2.5 ಲಕ್ಷ ರೂ./ವರ್ಷಕ್ಕಿಂತ ಹೆಚ್ಚಿನ ಪಿಎಫ್ ಹೂಡಿಕೆ ಮಾಡಿದ್ದಲ್ಲಿ ಅದರ ಮೇಲೆ ಕರ ವಿಧಿಸುವ ಸಂಬಂಧ 2021-22ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು.

ಈ ಮೂಲಕ ಸಾಮಾನ್ಯ ಜನರ ನಿವೃತ್ತ ಬದುಕಿಗೆ ಅನುಕೂಲವಾಗಬಲ್ಲ ದುಡ್ಡು ಇಡಬೇಕಾದ ಸವಲತ್ತನ್ನು ಮೇಲ್ವರ್ಗದ ಮಂದಿ ತಮ್ಮ ಹೆಚ್ಚುವರಿ ಸಂಪಾದನೆ ಇಡಲು ಬಳಕೆಯಾಗುವುದನ್ನು ತಡೆಗಟ್ಟಲು ಈ ಕ್ರಮವೆಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಪಿಎಫ್‌ ಮೇಲಿನ ಬಡ್ಡಿಯ ಮೇಲೆ ತೆರಿಗೆ ವಿಧಿಸುವ ಸಂಬಂಧ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿಯಮಗಳನ್ನು ಗೊತ್ತುಪಡಿಸಿದೆ. ತೆರಿಗೆ ಲೆಕ್ಕಾಚಾರಕ್ಕೆಂದೇ, ಪಿಎಫ್ ಖಾತೆಗಳಲ್ಲಿ ಉಪ ಖಾತೆಗಳನ್ನು ತೆರೆಯಲಾಗುವುದು ಎಂದು ಆದಾಯ ತೆರಿಗೆ (ತಿದ್ದುಪಡಿ) ನಿಯಮಗಳು, 2021ರಲ್ಲಿ ತಿಳಿಸಲಾಗಿದೆ.

BIG NEWS: ಸದ್ಯಕ್ಕೆ ಪ್ರಾಥಮಿಕ ಶಾಲೆಗಳ ಆರಂಭ ಇಲ್ಲ; ಸಚಿವ ಸುಧಾಕರ್ ಸ್ಪಷ್ಟನೆ

ಈ ಸಂಬಂಧ ಆದಾಯ ತೆರಿಗೆ ನಿಯಮಗಳು, 1962ಕ್ಕೆ, ನಿಯಮ 9ಸಿ ಬಳಿಕ, ಅದನ್ನು ಅನುಸರಿಸುವ ನಿಯಮ 9ಡಿಯನ್ನು ಸಿಬಿಡಿಟಿ ಸೇರಿಸಿದೆ:

1. ಸೆಕ್ಷನ್‌ 10ರ ಉಪ ವಿಧಿಗಳಾದ 11 ಮತ್ತು 12ರ ಉದ್ದೇಶಗಳಿಗಾಗಿ, ಹಿಂದಿನ ವಿತ್ತೀಯ ವರ್ಷದಲ್ಲಿ ಬಡ್ಡಿಯ ರೂಪದಲ್ಲಿ ಗಳಿಸಲಾದ ಆದಾಯವನ್ನು ಇಲ್ಲಿ ಇಳಿಯಪಡಿಸಲಾದ ಉಪವಿಧಿಗಳ ಅಡಿ ವಿಶ್ಲೇಷಿಸಲಾಗುವ ಒಟ್ಟಾರೆ ಆದಾಯದಿಂದ ಹೊರತುಪಡಿಸಲು ಬರುವುದಿಲ್ಲ. ಹಿಂದಿನ ವರ್ಷದಲ್ಲಿ ಗಳಿಸಲಾದ ಬಡ್ಡಿಯನ್ನು ತೆರಿಗೆ ವಿಧಿಸಬಲ್ಲ ಖಾತೆಯಲ್ಲಿ ಜಮೆಯಾದ ಮೊತ್ತವೆಂದು ಲೆಕ್ಕ ಮಾಡಲಾಗುವುದು.

2. ಉಪ ನಿಯಮ (1)ರ ಪ್ರಕಾರ ತೆರಿಗೆ ವಿಧಿಸಬಲ್ಲ ಬಡ್ಡಿಯನ್ನು ಲೆಕ್ಕಾಚಾರ ಮಾಡಲು, ಪ್ರತ್ಯೇಕ ಖಾತೆಗಳನ್ನು ಪಿಎಫ್ ಖಾತೆಗಳ ಒಳಗೇ ತೆರೆದು 2021-22ರ ವರ್ಷ ಹಾಗೂ ಅದರ ಹಿಂದಿನ ಎಲ್ಲಾ ವರ್ಷಗಳಿಗೆ ಅನ್ವಯವಾಗುವಂತೆ ನಿರ್ವಹಿಸಲಾಗುವುದು.

ತೆರಿಗೆ ಲೆಕ್ಕ ಹಾಕುವುದು ಹೇಗೆ ?

* ತೆರಿಗೆರಹಿತ ಕೊಡುಗೆಯು ಈ ಕೆಳಕಂಡ ಅಂಶಗಳ ಸಾರವಾಗಿದೆ, ಅವುಗಳೆಂದರೆ –

1. ಮಾರ್ಚ್ 31,2 2021 ರಂದು ಖಾತೆಯಲ್ಲಿ ಬಾಕಿ ಉಳಿದ ಮೊತ್ತ.

2. ಖಾತೆಯಲ್ಲಿ 2021-22 ಹಾಗೂ ಅದರ ಹಿಂದಿನ ವರ್ಷಗಳಲ್ಲಿ ತೆರಿಗೆ ವಿಧಿಸಬಲ್ಲ ಖಾತೆ ಹೊರತುಪಡಿಸಿ ಮಾಡಲಾದ ಪಿಎಫ್ ಹೂಡಿಕೆ.

3. ಉಪ ವಿಭಾಗ (i) ಮತ್ತು ಉಪ ವಿಭಾಗ (ii)ರ ಮೇಲೆ ಗಳಿಸಲಾದ ಬಡ್ಡಿ, ಹಿಂಪಡೆತದಿಂದ ತಗ್ಗಿಸಿದಂತೆ, ಇದ್ದಲ್ಲಿ, ಅಂಥ ಖಾತೆಯಿಂದ; ಮತ್ತು

* ಖಾತೆಯಲ್ಲಿರುವ ತೆರಿಗೆ ವಿಧಿಸಬಲ್ಲ ಕೊಡುಗೆಯ ಈ ಕೆಳಕಂಡ ಅಂಶಗಳ ಒಟ್ಟು —

1. 2021-22ರ ವಿತ್ತೀಯ ವರ್ಷ ಹಾಗೂ ಹಿಂದಿನ ವರ್ಷಗಳಲ್ಲಿ ನಿಗದಿ ರೇಖೆಗಿಂತ ಹೆಚ್ಚು ಇರುವ ತೆರಿಗೆ ವಿಧಿಸಬಲ್ಲ ಮೊತ್ತ.

2.ಉಪ ವಿಭಾಗ (i) ರ ಮೇಲೆ ಗಳಿಸಲಾದ ಬಡ್ಡಿ, ಹಿಂಪಡೆತದಿಂದ ತಗ್ಗಿಸಿದಂತೆ, ಇದ್ದಲ್ಲಿ, ಅಂಥ ಖಾತೆಯಿಂದ; ಮತ್ತು

* ನಿಗದಿ ರೇಖೆಯ ಎಂದರೆ:

1. ಐದು ಲಕ್ಷ ರೂಪಾಯಿಗಳು, ಸೆಕ್ಷನ್‌ 10ರ ಉಪ ವಿಭಾಗ (11) ಅಥವಾ ಉಪವಿಭಾಗ (12)ರಲ್ಲಿನ ಎರಡನೇ ಸಾಧ್ಯತೆ ಅನ್ವಯವಾದರೆ.

2. ಇತರೆ ಪ್ರಕರಣಗಳಲ್ಲಿ 2,50,000 ರೂಪಾಯಿಗಳು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...