alex Certify ಈ ಕಾರಣಕ್ಕೆ ಬಳಕೆದಾರರ ಕ್ಷಮೆ ಯಾಚಿಸಿದ ಫೇಸ್‌ ಬುಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಬಳಕೆದಾರರ ಕ್ಷಮೆ ಯಾಚಿಸಿದ ಫೇಸ್‌ ಬುಕ್

ಸಾಮಾಜಿಕ ಜಾಲತಾಣ ವೇದಿಕೆಯಾದ ಫೇಸ್​ಬುಕ್​ನಲ್ಲಿ ಕಪ್ಪು ವರ್ಣದ ಪುರುಷರನ್ನು ಸಸ್ತನಿ ವರ್ಗದ ಇತರೆ ಪ್ರಾಣಿಗಳು ಎಂದು ತಪ್ಪಾಗಿ ಭಾವಿಸಿದ ಬಳಿಕ ಎಫ್.​ಬಿ. ಬಳಕೆದಾರರಿಗೆ ವಿಷಯಗಳನ್ನು ಶಿಫಾರಸು ಮಾಡುತ್ತಿದ್ದ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿದೆ ಎಂದು ಮಾಹಿತಿ ನೀಡಿದೆ.

ಫೇಸ್​ಬುಕ್​ ವಕ್ತಾರ ಈ ವಿಚಾರವಾಗಿ ಮಾಹಿತಿ ನೀಡಿದ್ದು ಇದು ನಿಜಕ್ಕೂ ಕ್ಷಮಿಸಲಾಗದಂತಹ ಪ್ರಮಾದವಾಗಿದೆ. ಈ ರೀತಿ ತಪ್ಪಾಗಿ ಶಿಫಾರಸು ನೀಡಿದ ಸಾಫ್ಟ್​ವೇರ್​​ನ್ನು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಿದ್ರು.

ಈ ತಪ್ಪಾದ ಶಿಫಾರಸ್ಸು ಯಾರ್ಯಾರಿಗೆ ಕಂಡಿದೆಯೋ ಅವರ ಬಳಿ ಕ್ಷಮೆ ಯಾಚಿಸುವುದಾಗಿ ಫೇಸ್​ಬುಕ್​ ಶುಕ್ರವಾರ ಹೇಳಿದೆ.

ಬಳಕೆದಾರರಿಗೆ ವಿಡಿಯೋಗಳನ್ನು, ಫೋಟೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನೇ ಹಿಂಪಡೆದಿದ್ದೇವೆ. ಈ ರೀತಿಯ ದೋಷ ಹೇಗೆ ಉಂಟಾಯ್ತು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ ಮುಂದೆ ಇಂತಹ ಪ್ರಮಾದ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದೂ ಅಭಯ ನೀಡಿದೆ.

ನಾವು ಯಾವುದಾದರೂ ವಿಡಿಯೋಗಳನ್ನು ಫೇಸ್​ಬುಕ್​ನಲ್ಲಿ ವೀಕ್ಷಣೆ ಮಾಡಿದರೆ ಬಳಿಕ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನು ಫೇಸ್​ಬುಕ್​ ಹೊಂದಿದೆ. ಅದೇ ರೀತಿ ಕಪ್ಪು ಪುರುಷರನ್ನು ಒಳಗೊಂಡ ಬ್ರಿಟಿಷ್​ ಟಾಬ್ಲ್ಯಾಯ್ಡ್​​ ವಿಡಿಯೋಗಳನ್ನ ನೋಡಿದ ಫೇಸ್​ಬುಕ್​ ಬಳಕೆದಾರರ ಬಳಿ ಸಸ್ತನಿಗಳ ವಿಡಿಯೋ ನೋಡಬಯಸುತ್ತೀರಾ ಎಂಬ ಶಿಫಾರಸು ಫೇಸ್​ಬುಕ್​ನಿಂದ ಕಾಣಸಿಕ್ಕಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...