ನವದೆಹಲಿ: ಖಾದ್ಯತೈಲ ಡಿಸೆಂಬರ್ ನಿಂದ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಆಹಾರ ಮಂತ್ರಾಲಯ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ದೇಶದಲ್ಲಿ ಕಾರ್ಯತಂತ್ರಗಳ ದರ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲ ದರ ಹೆಚ್ಚಳವಾಗಿದ್ದು, ದೇಶದ ಬೇಡಿಕೆಯ ಶೇಕಡ 60 ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಮಲೇಶಿಯಾ ಮತ್ತು ಇಂಡೋನೇಷ್ಯಾದಲ್ಲಿ ಜೈವಿಕ ಇಂಧನವಾಗಿ ತಾಳೆ ಎಣ್ಣೆ ಬಳಕೆ ಮಾಡಲಾಗುತ್ತದೆ. ಭಾರತಕ್ಕೆ ಖಾದ್ಯ ತೈಲ ಆಮದು ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ದೇಶದಲ್ಲಿ ಖಾದ್ಯ ತೈಲ ದರ ಏರಿಕೆ ಕಂಡಿದೆ.
ತಾಳೆ ಎಣ್ಣೆ ದರ 139 ರೂಪಾಯಿವರೆಗೂ ಏರಿಕೆಯಾಗಿದೆ. ಉಳಿದ ಖಾದ್ಯ ತೈಲಗಳ ದರ ಕೂಡ ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಖಾದ್ಯ ತೈಲ ದರ ಸ್ಥಿರವಾಗಿಸುವ ನಿಟ್ಟಿನಲ್ಲಿ ಸರ್ಕಾರ ಆಮದು ಸುಂಕ ಇಳಿಕೆ ಮಾಡಿದೆ. ಅಲ್ಲದೆ ಖಾದ್ಯ ತೈಲ ಉತ್ಪಾದನೆ ಹೆಚ್ಚಳಕ್ಕೆ ಸುಮಾರು 11 ಸಾವಿರ ಕೋಟಿ ರೂಪಾಯಿಗಳ ರಾಷ್ಟ್ರೀಯ ಯೋಜನೆ ಕೈಗೊಳ್ಳಲಾಗಿದೆ. ಹೊಸ ಬೆಳೆ ಡಿಸೆಂಬರ್ ವೇಳೆಗೆ ಹೊಸ ಬೆಳೆಗಳ ಉತ್ಪನ್ನ ಆಮದು ಆಗಲಿದ್ದು, ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲ ದರ ಇಳಿಕೆಯಾಗಬಹುದು ಎಂದು ಸುಧಾಂಶು ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.