ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿನ ಮಹಿಳೆಯರ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಇಲ್ಲಿನ 250 ಮಹಿಳಾ ನ್ಯಾಯಾಧೀಶರು ಜೀವಭಯದಲ್ಲಿದ್ದಾರೆ.
ಅಫ್ಘನ್ ನಲ್ಲಿ ಹಲವಾರು ಮಂದಿ ದೇಶ ಬಿಟ್ಟು ತೆರಳುತ್ತಿದ್ದಾರೆ. ಕೆಲವು ಮಹಿಳಾ ನ್ಯಾಯಾಧೀಶರು ಪಲಾಯನಗೈಯಲು ಸಾಧ್ಯವಾದರೆ ಇನ್ನೂ ಕೆಲವರು ಅಲ್ಲಿಂದ ಹೊರಬರಲು ಪ್ರಯತ್ನಪಡುತ್ತಿದ್ದಾರೆ.
ತಾಲಿಬಾನ್ ದೇಶದಾದ್ಯಂತ ಖೈದಿಗಳನ್ನು ಸೆರೆಯಿಂದ ಬಿಡುಗಡೆ ಮಾಡಿದೆ. ಇದು ಮಹಿಳಾ ನ್ಯಾಯಾಧೀಶರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ ಎಂದು ಯುರೋಪಿಗೆ ಪಲಾಯನ ಮಾಡಿರುವ ಅಫ್ಘನ್ ನ್ಯಾಯಾಧೀಶೆಯೊಬ್ಬರು ಹೇಳಿದ್ದಾರೆ.
“ಕಾಬೂಲ್ ನಲ್ಲಿ ನನ್ನ ಮನೆಗೆ ಬಂದ ತಾಲಿಬಾನ್, ಆ ಮಹಿಳಾ ನ್ಯಾಯಾಧೀಶರು ಎಲ್ಲಿದ್ದಾರೆ ಎಂದು ಅಲ್ಲಿದ್ದ ಜನರನ್ನು ಕೇಳಿದ್ದಾರೆ. ಅವರನ್ನು ನಾನು ಜೈಲಿಗೆ ಹಾಕಿದ್ದೆ” ಎಂದು ಮಹಿಳಾ ನ್ಯಾಯಾಧೀಶರು ಹೇಳಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಮನೆಗೆ ಮರಳಿದ ಸಹೋದ್ಯೋಗಿಗಳಿಂದ ಸಂಪರ್ಕದಲ್ಲಿದ್ದ ಮಹಿಳಾ ನ್ಯಾಯಾಧೀಶರ ಬಳಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ದುಃಖ ತೋಡಿಕೊಂಡಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.