ಪೇಂಟಿಂಗ್ ಮಾರಲು ವೃದ್ದನ ಪರದಾಟ…! ಮರುಗಿದ ಮಹಿಳೆ ಮಾಡಿದ್ದೇನು ಗೊತ್ತಾ…? 04-09-2021 9:05AM IST / No Comments / Posted In: Latest News, Live News, International ಪ್ಯಾರಿಸ್ ನ ಬೀದಿಯಲ್ಲಿ ವ್ಯಕ್ತಿಯೊಬ್ಬರು ಚಿತ್ರಕಲೆ ಮಾರಾಟ ಮಾಡುತ್ತಿದ್ದರು. ಆದರೆ, ಅದನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರದೇ ಇದ್ದಾಗ ಮಹಿಳೆಯೊಬ್ಬಳು ಚಿತ್ರಕಲೆಯನ್ನು ಕೊಂಡುಕೊಂಡರು. ತನ್ನ ಪೇಂಟಿಂಗ್ ಮಾರಾಟವಾದ ಬಳಿಕ ವ್ಯಕ್ತಿಯ ಮುಖದಲ್ಲಿ ಕಂಡು ಬಂದ ನಗು ಇದೆಯಲ್ಲಾ ಅದು ಹೇಳತೀರದ್ದು…..ಸದ್ಯ ಈ ವಿಡಿಯೋ ವೈರಲ್ ಆಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ‘ಅಮೃತ ಕ್ರೀಡಾ ಯೋಜನೆ’ಗೆ ಒಪ್ಪಿಗೆ ತನ್ನ ವರ್ಣಚಿತ್ರವನ್ನು ಪ್ಯಾರಿಸ್ ನ ಬೀದಿ-ಬೀದಿಯಲ್ಲಿ ವ್ಯಕ್ತಿಯೊಬ್ಬ ಮಾರಾಟ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಯಾರೊಬ್ಬರೂ ಇದನ್ನು ಕೊಂಡುಕೊಳ್ಳಲು ಮುಂದೆ ಬರಲಿಲ್ಲ. ಅಪಾರ್ಟ್ ಮೆಂಟ್ ಕಿಟಕಿಯಿಂದ ಇವೆಲ್ಲವನ್ನೂ ವಿಡಿಯೋ ಮಾಡುತ್ತಿದ್ದ ಮಹಿಳೆ, ಕೊನೆಗೆ ತಾನೇ ಸ್ವತಃ ವ್ಯಕ್ತಿಯ ಬಳಿ ಬಂದು ಆ ಪೇಂಟಿಂಗ್ ಅನ್ನು ಖರೀದಿಸಿದ್ದಾಳೆ. ವರ್ಣಚಿತ್ರವು ಸುಂದರವಾಗಿದ್ದು, ಬಹಳ ಸೂಕ್ಷ್ಮವಾಗಿ ರಚಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋದ ಅತ್ಯಂತ ಹೃದಯಸ್ಪರ್ಶಿ ಘಟನೆಯೆಂದರೆ ಅದು, ವರ್ಣಚಿತ್ರ ಮಾರಾಟವಾದಾಗ ಆ ವ್ಯಕ್ತಿಯ ಮುಖದಲ್ಲಿ ಕಂಡು ಬಂದ ಸಂತೋಷ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. (Paris)I’ve seen him frequently in the neighbourhood but it was the first time I saw him selling anything. He said he liked to paint & this was from his collection.He asked for 30 euros but I thought it was quite fine and offered 40…" 🎥@MessyNessyChicpic.twitter.com/owaPa6iAgS — GoodNewsCorrespondent (@GoodNewsCorres1) September 1, 2021