ಲಂಡನ್: 19ನೇ ಶತಮಾನದ ಇಂಗ್ಲೆಂಡಿನ ಅತ್ಯಂತ ದೂರದ ಮನೆ ಎಂದು ಹೆಸರುವಾಸಿಯಾಗಿರುವ ಮನೆಯನ್ನು ಮಾರಾಟಕ್ಕಿಡಲಾಗಿದೆ. 200 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಮನೆಯನ್ನು 1.5 ಮಿಲಿಯನ್ ಪೌಂಡ್ ಅಂದರೆ 15 ಕೋಟಿ ರೂ.ಗಳಿಗೆ ಮಾರಾಟಕ್ಕೆ ಇಡಲಾಗಿದೆ.
ಸ್ಕಿದ್ದಾ ಹೌಸ್ ಎಂದೇ ಕರೆಯಲಾಗಿರುವ ಈ ಮನೆಯು, ಕುಂಬ್ರಿಯಾದ ಕೆಸ್ವಿಕ್ ಹತ್ತಿರ ಲೇಕ್ ಜಿಲ್ಲೆಯಲ್ಲಿ ಇದೆ. ಇದು ಹತ್ತಿರದ ರಸ್ತೆಯಿಂದ 3.5 ಮೈಲಿ ದೂರದಲ್ಲಿದೆ. ಹಾಗೂ 3,000 ಎಕರೆ ಸ್ಕಿದ್ದಾವ್ ಅರಣ್ಯದಲ್ಲಿ ಯಾವುದೇ ಕಟ್ಟಡ ಅಥವಾ ಮನೆ ಕಾಣ ಸಿಗುವುದಿಲ್ಲ.
ಈ ಮನೆಯಲ್ಲಿ ಆರು ಬೆಡ್ ರೂಂಗಳು (ಮಲಗುವ ಕೋಣೆ), ಒಂದು ದೊಡ್ಡ ಅಡುಗೆ ಮನೆ, ಊಟದ ಕೋಣೆ ಹಾಗೂ ಮೂರು ವಿಶಾಲವಾದ ಸ್ವಾಗತ ಕೊಠಡಿಗಳಿವೆ. ಸ್ಕಿಡಾ ಪರ್ವತದ ಮೂಲಕ ಕೇವಲ ಕಾಲ್ನಡಿಗೆಯಲ್ಲಿ ಅಥವಾ ಆಫೋ-ರೋಡ್ ವಾಹನದ ಮೂಲಕ ಪ್ರವೇಶಿಸಬಹುದು.
ಕೊರೊನಾ ಬಳಿಕ ಮನೆ ಖರೀದಿಸುವವರ ಮನಃಸ್ಥಿತಿಯಲ್ಲಾಗಿದೆ ಈ ಬದಲಾವಣೆ
ಈ ಮನೆಗೆ ಟಿವಿ, ಇಂಟರ್ನೆಟ್ ಅಥವಾ ಮೊಬೈಲ್ ಫೋನ್ ಸಂಪರ್ಕವಿಲ್ಲ. ಅದೂ ಅಲ್ಲದೆ ವಿದ್ಯುತ್ ಸಂಪರ್ಕ ಕೂಡ ಲಭ್ಯವಿಲ್ಲ. ಚಳಿಗಾಲದಲ್ಲಿ, ಸೌರ ಫಲಕಗಳ ಮೂಲಕ, ಮರವನ್ನು ಸುಡುವ ಒಲೆಯ ಮೂಲಕ ಮನೆಯನ್ನು ಬೆಚ್ಚಗೆ ಇರಿಸಲಾಗುತ್ತದೆ. ಹಾಗೂ ನೀರಿಗೆ ಹತ್ತಿರದ ಹೊಳೆಯನ್ನು ಅವಲಂಬಿಸಬೇಕಾಗುತ್ತದೆ.
ಯುಕೆ ಮೂಲದ ಕಂಟ್ರಿ ಲಿವಿಂಗ್, ಈ ಆಸ್ತಿಯನ್ನು 1829ರಲ್ಲಿ ಅರ್ಕರ್ ಆಫ್ ಎಕರ್ ಮಾಂಟ್ ಆಫ್ ಕಾಕರ್ ಮೌತ್ ಕ್ಯಾಸಲ್ ಗೇಮ್ ಕೀಪರ್ ಗೆ ಶೂಟಿಂಗ್ ಲಾಡ್ಜ್ ಆಗಿ ನಿರ್ಮಿಸಿದೆ ಎಂದು ವರದಿ ಮಾಡಿದೆ. ಮೂಲ ಮನೆಯನ್ನು ಈ ಹಿಂದೆ ಶಾಲಾ ಟ್ರಿಪ್ ಸೆಂಟರ್ ಆಗಿ ಬಳಸಲಾಗುತ್ತಿತ್ತು. ಪ್ರಸ್ತುತ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ನೊಂದಿಗೆ ಸಂಯೋಜಿತವಾಗಿ ಸ್ವತಂತ್ರ ಹಾಸ್ಟೆಲ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಈ ಮನೆಯು ಒಂದು ಕುಟುಂಬ ವಾಸಿಸಲು ಯೋಗ್ಯವಾಗಿದೆ ಎಂದು ಹೇಳಲಾಗಿದೆ.