alex Certify ಕೋವಿಡ್​ ಮರಣ ಪ್ರಮಾಣ ಪತ್ರ: ಮಾರ್ಗಸೂಚಿ ರಚನೆಗೆ ಕೇಂದ್ರಕ್ಕೆ ‘ಸುಪ್ರೀಂ’ ಡೆಡ್​ಲೈನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಮರಣ ಪ್ರಮಾಣ ಪತ್ರ: ಮಾರ್ಗಸೂಚಿ ರಚನೆಗೆ ಕೇಂದ್ರಕ್ಕೆ ‘ಸುಪ್ರೀಂ’ ಡೆಡ್​ಲೈನ್​

ಕೋವಿಡ್​ 19ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವ ಸಂಬಂಧ ಮಾರ್ಗಸೂಚಿಯನ್ನು ರೂಪಿಸದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಸೆಪ್ಟೆಂಬರ್​ 11ರ ಒಳಗಾಗಿ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಈ ಸಂಬಂಧ ಈಗಾಗಲೇ ನಾವು ಆದೇಶ ಜಾರಿಗೆ ತಂದಿದ್ದೇವೆ. ಈಗಾಗಲೇ ಒಂದು ಬಾರಿ ಸಮಯಾವಕಾಶವನ್ನೂ ವಿಸ್ತರಿಸಲಾಗಿದೆ. ನೀವು ಮಾರ್ಗಸೂಚಿ ರೂಪಿಸುವ ಹೊತ್ತಿಗೆ ಕೊರೊನಾ ಮೂರನೇ ಅಲೆಯು ಮುಕ್ತಾಯಗೊಳ್ಳುತ್ತದೆ ಎನಿಸುತ್ತದೆ ಎಂದು ನ್ಯಾ. ಎಂ.ಆರ್.​ ಶಾ ಹಾಗೂ ಅನಿರುದ್ಧ ಬೋಸ್​ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಅರ್ಜಿದಾರ ವಕೀಲ ಗೌರವ್​ ಬನ್ಸಾಲ್​, ಮಾರ್ಗಸೂಚಿ ರಚಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾಲ್ಕು ವಾರಗಳ ಕಾಲ ವಿಸ್ತರಣೆ ಮಾಡಿದೆ. ಹೀಗಾಗಿ ವಿಚಾರಣೆಯ ನೆಪದಲ್ಲಿ ಮಾರ್ಗಸೂಚಿ ರಚನೆ ಇನ್ನಷ್ಟು ವಿಳಂಬವಾಗಬಾರದು ಎಂದು ಹೇಳಿದ್ರು.

ಜೂನ್​ 30ರಂದು ನೀಡಿದ ನಿರ್ದೇಶನದ ಅನುಸಾರ ಕೇಂದ್ರ ಸರ್ಕಾರವು ಸೆಪ್ಟೆಂಬರ್​ 11ರಂದು ಕೋವಿಡ್​ ಮರಣ ಪ್ರಮಾಣ ಪತ್ರ ಮಾರ್ಗಸೂಚಿ ಸಂಬಂಧ ಅಫಿಡವಿಟ್​​ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೂಚನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...