alex Certify ಬರೋಬ್ಬರಿ 13 ವರ್ಷಗಳ ಬಳಿಕ ಅಹಮದಾಬಾದ್​​ ಸರಣಿ ಸ್ಫೋಟದ ಕೋರ್ಟ್​ ವಿಚಾರಣೆ ಪೂರ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 13 ವರ್ಷಗಳ ಬಳಿಕ ಅಹಮದಾಬಾದ್​​ ಸರಣಿ ಸ್ಫೋಟದ ಕೋರ್ಟ್​ ವಿಚಾರಣೆ ಪೂರ್ಣ

13 ವರ್ಷಗಳ ಹಿಂದೆ ಗುಜರಾತ್​​ನ ಅಹಮದಾಬಾದ್​​ನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಂದು ಇಲ್ಲಿನ ವಿಶೇಷ ನ್ಯಾಯಾಲಯವು 77 ಮಂದಿ ಆರೋಪಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

ಇದೀಗ ಈ ಪ್ರಕರಣದ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆಯನ್ನು ಕೈಗೊಂಡಿದ್ದ ನ್ಯಾಯಾಲಯವು ಬರೋಬ್ಬರಿ 1100 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಸರಣಿ ಬಾಂಬ್​ ಸ್ಫೋಟ ನಡೆದ 1 ವರ್ಷಗಳ ಬಳಿಕ ಅಂದರೆ 2009ರ ಡಿಸೆಂಬರ್​ನಿಂದ ಕೋರ್ಟ್​ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ವಿಶೇಷ ನ್ಯಾಯಾಧೀಶ ಎ.ಆರ್.​ ಪಟೇಲ್​​ ಗುರುವಾರದಂದು ಈ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. 2008ರ ಜುಲೈ 26ರಂದು ಅಹಮದಾಬಾದ್​​ನಲ್ಲಿ ಬಾಂಬ್​ ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ಕನಿಷ್ಟ 56 ಮಂದಿ ಸಾವನ್ನಪ್ಪಿದ್ದರು. ಹಾಗೂ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಇಂಡಿಯನ್​ ಮುಜಾಹಿದ್ದೀನ್​​ ಹಾಗೂ ನಿಷೇಧಿತ ಸ್ಟೂಡೆಂಟ್ಸ್​ ಇಸ್ಲಾಮಿಕ್​​ ಮೂಮೆಂಟ್​ ಆಫ್​ ಇಂಡಿಯಾ ಈ ಸ್ಪೋಟದ ರೂವಾರಿ ಎಂದು ಹೇಳಿದ್ದಾರೆ. 2002ರ ಗೋಧ್ರಾ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಈ ಸ್ಪೋಟಕ್ಕೆ ಪ್ಲಾನ್​ ಮಾಡಿದ್ದರು ಎನ್ನಲಾಗಿದೆ.

ಅಹಮದಾಬಾದ್​ನಲ್ಲಿ ಸರಣಿ ಸ್ಪೋಟ ನಡೆದ ಕೆಲವು ದಿನಗಳ ಬಳಿಕ ಪೊಲೀಸರು ಸೂರತ್​​ನ ವಿವಿಧ ಭಾಗಗಳಲ್ಲಿ ಬಾಂಬ್​​ಗಳನ್ನು ವಶಕ್ಕೆ ಪಡೆದಿದ್ದರು. ಬಾಂಬ್​ ಸ್ಫೋಟದ ಸಂಬಂಧ ಅಹಮದಾಬಾದ್​ನಲ್ಲಿ 20 ​ ಹಾಗೂ ಸೂರತ್​​ನಲ್ಲಿ 15 ಎಫ್​ಐಆರ್​ಗಳನ್ನು ದಾಖಲಿಸಲಾಗಿತ್ತು. ನ್ಯಾಯಾಲಯವು ಎಲ್ಲಾ 35 ಪ್ರಕರಣಗಳನ್ನು ವಿಲೀನಗೊಳಿಸಿ ವಿಚಾರಣೆ ಕೈಗೆತ್ತಿಕೊಂಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...