ಅಮೆರಿಕ ಬೆಂಬಲಿತ ಅಫ್ಘಾನಿಸ್ತಾನ ಸರ್ಕಾರವನ್ನು ಕೆಡವಿ ದೇಶವನ್ನು ಸ್ವಾಧೀನಪಡಿಸಿಕೊಂಡಿರುವ ತಾಲಿಬಾನಿಗಳು ಈಗಾಗಲೇ ಅನೇಕ ಹಿಂಸಾಚಾರಗಳನ್ನು ನಡೆಸಿದ್ದಾರೆ.
ಇದೀಗ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಮಹಿಳೆಯರ ಪಟ್ಟಿ ತಯಾರಿಸುತ್ತಿರುವ ತಾಲಿಬಾನಿಗಳು ಅವರನ್ನು ಕೊಲ್ಲಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವೇಶ್ಯಾವಾಟಿಕೆ ನಡೆಸುವ ಮಹಿಳೆಯರಿಗೆ ತಾಲಿಬಾನಿಗಳು ಮರಣದಂಡನೆ ಶಿಕ್ಷೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಶ್ಲೀಲ ತಾಣಗಳಲ್ಲಿ ಹುಡುಕಾಟ ಶುರುಮಾಡಿರುವ ತಾಲಿಬಾನಿಗಳು ಅಲ್ಲಿ ವಿದೇಶಿಯರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಅಫ್ಘನ್ ಮಹಿಳೆಯರಿಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಅಂದರೆ 1996 ರಿಂದ 2001ರಲ್ಲಿ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದ್ದ ವೇಳೆಯಲ್ಲಿಯೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರಿಗೆ ಸಾರ್ವಜನಿಕವಾಗಿ ಮರಣ ದಂಡನೆ ಶಿಕ್ಷೆಗೆ ಒಳಪಡಿಸಲಾಗಿತ್ತು.
ಹೀಗಾಗಿ ಈ ಬಾರಿ ಕೂಡ ವೇಶ್ಯಾವಾಟಿಕೆಯಲ್ಲಿ ಇರುವವರನ್ನು ಕೊಲ್ಲಲು ಅಥವಾ ಶಾಶ್ವತವಾಗಿ ಅಂತಹ ಮಹಿಳೆಯರನ್ನು ತಮ್ಮ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳಲು ತಾಲಿಬಾನಿಗಳು ಅಶ್ಲೀಲ ತಾಣಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.