alex Certify ಮತ್ತೊಂದು ಪದಕ ಗೆಲ್ಲುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಚಿನ್ನ’ದ ಹುಡುಗಿ ಅವನಿ ಲೇಖಾರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಪದಕ ಗೆಲ್ಲುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಚಿನ್ನ’ದ ಹುಡುಗಿ ಅವನಿ ಲೇಖಾರಾ

ಭಾರತದ ಚಿನ್ನದ ಹುಡುಗಿ ಅವನಿ ಲೇಖಾರ ಒಂದೇ ಪ್ಯಾರಾಲಿಂಪಿಕ್​​ನ 2 ವಿಭಾಗಗಳಲ್ಲಿ ಪದಕವನ್ನು ಗೆದ್ದ ದೇಶ ಮೊದಲ ಪ್ಯಾರಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವನಿ ಮಹಿಳೆಯರ 50 ಮೀಟರ್​ ಏರ್​ ರೈಫಲ್​ನಲ್ಲಿ ಕಂಚಿನ ಪದಕ ಸಂಪಾದಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಅವನಿ ಈ ಹಿಂದೆ 10 ಮೀಟರ್​ ಏರ್​ ರೈಫಲ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಸ್ಟಾಡಿಂಗ್​ ಪೊಸಿಷನ್​​ನಲ್ಲಿ 15 ಶಾಟ್​ಗಳನ್ನು ಹೊಡೆದ ಅವನಿ ಒಟ್ಟು 149.5 ಅಂಕಗಳನ್ನು ಸಂಪಾದಿಸುವ ಮೂಲಕ 4ನೇ ಸ್ಥಾನವನ್ನು ಪಡೆದಿದ್ದರು. ಪ್ರೋನ್​ ಪೊಸಿಷನ್​ನಲ್ಲಿ 50.8,50.3 ಹಾಗೂ 48.4 ಸೇರಿಸಿ ಒಟ್ಟು 149.5 ಅಂಕಗಳನ್ನು ಸಂಪಾದಿಸಿದರು. ಇದಾದ ಬಳಿಕ ಅವರು 6ನೇ ಸ್ಥಾನಕ್ಕೆ ಕುಸಿದರು.

ಸ್ಟ್ಯಾಂಡಿಂಗ್​ ಪೊಸಿಷನ್​ನಲ್ಲಿ ಮೊದಲ 2 ಸರಣಿಗಳ ಬಳಿಕ ಅವನಿ 4ನೇ ಸ್ಥಾನಕ್ಕೆ ಏರಿದರು. ಉಕ್ರೇನ್​​ನ ಇರಿನಾ ಶ್ಚೆಟ್ನಿಕ್​ ವಿರುದ್ಧ ಮೂರನೇ ಸ್ಥಾನಕ್ಕಾಗಿ ಲೇಖಾರಾ ಪೈಪೋಟಿಗೆ ಇಳಿದಿದ್ದರು. ಲೇಖಾರ 10.5 ಶಾಟ್​ ಹೊಡೆದರೆ ಇರಿನಾ 9.9 ಶಾಟ್​ ಹೊಡೆಯಲಷ್ಟೇ ಶಕ್ತರಾದರು. ಈ ಮೂಲಕ ಕಂಚಿನ ಪದಕ ಅವನಿಯ ಪಾಲಾಗಿದೆ.

ಬೆಳ್ಳಿ ಪದಕಕ್ಕೆ ಚೀನಾದ ಝಾಂಗ್​ ಎಂಬವರಿಗೆ ಲೇಖಾರ ಪೈಪೋಟಿ ನೀಡಿದ್ದರು. ಲೇಖಾರಾ 10.2 ಶಾಟ್​ ಹೊಡೆದರೆ ಚೀನಾದ ಆಟಗಾರ್ತಿ 10.3 ಶಾಟ್​ ಹೊಡೆಯುವ ಮೂಲಕ ಲೇಖಾರಾರನ್ನು ಹಿಂದಿಕ್ಕಿದರು.

19 ವರ್ಷ ಪ್ರಾಯದ ಜೈಪುರದ ಈ ಆಟಗಾರ್ತಿ ಪ್ಯಾರಾಲಿಂಪಿಕ್​ನಲ್ಲಿ ಭರ್ಜರಿ ಸಾಧನೆಗೈದಿದ್ದಾರೆ. ಅಂದಹಾಗೆ ಟೋಕಿಯೋ ಗೇಮ್​ನಲ್ಲಿ ಅವನಿ ಇನ್ನೂ ಒಂದು ಆಟದಲ್ಲಿ ಪ್ರದರ್ಶನ ನೀಡಬೇಕಿದೆ. ಈ ಸ್ಪರ್ಧೆಯಲ್ಲೂ ಅವನಿ ಪದಕ ಸಂಪಾದಿಸುವಲ್ಲಿ ಯಶಸ್ವಿಯಾದಲ್ಲಿ ಒಂದೇ ಪ್ಯಾರಾಲಿಂಪಿಕ್​ನಲ್ಲಿ ಮೂರು ಪದಕಗಳನ್ನು ಸಂಪಾದಿಸಿದ ಭಾರತದ ಮೊದಲ ವನಿತೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...