alex Certify ಬೆಚ್ಚಿಬೀಳಿಸುವಂತಿದೆ ಪುಟ್ಟ ಕಂದನ ಜೊತೆ ತಾಯಿ ಮಾಡಿದ ಕ್ರೌರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಪುಟ್ಟ ಕಂದನ ಜೊತೆ ತಾಯಿ ಮಾಡಿದ ಕ್ರೌರ್ಯ

ತಾಯಿ ಎಂದಿಗೂ ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ. ತಾಯಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ದಂಗಾಗಿಸುವಂತಿದೆ.

ಮಾಸ್ಕೋದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವನ್ನು ಕತ್ತಲ ಕೋಣೆಯಲ್ಲಿ, ಬೆಕ್ಕುಗಳ ಜೊತೆ ಬಿಟ್ಟಿದ್ದಾಳೆ. 35 ವರ್ಷದ ಅಲ್ಪ್ರಿಕಾ ರೈನೆ ಎಂಬಾಕೆ, ಮೂರು ವರ್ಷದ ಮಗುವನ್ನು, ಬೆಕ್ಕುಗಳ ಜೊತೆ ಕತ್ತಲ ಕೋಣೆಯಲ್ಲಿ ಬಿಟ್ಟಿದ್ದಾಳೆ. ಮೂರು ವರ್ಷಗಳ ಕಾಲ, ಕಿಟಕಿಯಿಲ್ಲದ ಕೋಣೆಯಲ್ಲಿ, ಬೆಕ್ಕಿನ ಜೊತೆ ಬಾಲಕಿ ಬೆಳೆದಿದ್ದಾಳೆ. ಮಗಳಿಗೂ ಬೆಕ್ಕಿನ ಆಹಾರವನ್ನು ಆಕೆ ನೀಡ್ತಿದ್ದಳು ಎನ್ನಲಾಗಿದೆ.

ವರದಿಯ ಪ್ರಕಾರ, 3 ವರ್ಷಗಳ ಕಾಲ ಬೆಕ್ಕುಗಳೊಂದಿಗೆ ಕೋಣೆಯಲ್ಲಿ ಇದ್ದ ಹುಡುಗಿ, ಸಂಪೂರ್ಣ ಬದಲಾಗಿದ್ದಾಳೆ. ಆಕೆಗೆ ಮನುಷ್ಯರ ಭಾಷೆ ಅರ್ಥವಾಗುತ್ತಿಲ್ಲ. ಬೆಕ್ಕುಗಳು ಕರೆದಾಗ, ಬೆಕ್ಕುಗಳನ್ನು ಹುಡುಗಿ ಹಿಂಬಾಲಿಸುತ್ತಿದ್ದಾಳೆ. ಹುಡುಗಿ ಬೆಕ್ಕುಗಳಂತೆ ನಾಲ್ಕು ಕಾಲುಗಳ ಮೇಲೆ ನಡೆಯುತ್ತಿದ್ದಾಳೆ. ತನ್ನ ಹೆಸರನ್ನು ಕಿಟ್ಟಿ ಎಂದುಕೊಂಡಿದ್ದಾಳೆ.

ಬಾಲಕಿ ತಾಯಿ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದರು. ನ್ಯಾಯಾಲಯ, ತಾಯಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಹಿಳೆ ತನ್ನ ಎರಡನೇ ಮಗಳನ್ನು ಇಷ್ಟಪಡ್ತಿರಲಿಲ್ಲವಂತೆ. ಇದೇ ಕಾರಣಕ್ಕೆ ಆಕೆ ಬೆಕ್ಕಿನ ಕೋಣೆಯಲ್ಲಿ ಮಗಳನ್ನು ಹಾಕಿದ್ದಳಂತೆ. ತನ್ನ ಮೊದಲ ಮಗಳ ಜೊತೆ ಬೇರೊಂದು ಮನೆಯಲ್ಲಿ ವಾಸವಾಗಿದ್ದ ಮಹಿಳೆ, ಆಗಾಗ ಬೆಕ್ಕಿನ ರೂಮ್ ಕ್ಲೀನ್ ಮಾಡಲು ಹೋಗ್ತಿದ್ದಳಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...