ಕೊರೊನಾ ತಡೆ ಲಸಿಕೆಗಳನ್ನು ಹಾಕುವ ವೈದ್ಯರ ತಂಡವು ಮನೆಗಳತ್ತ ಬರುತ್ತಿದೆ. ಈ ಲಸಿಕೆಯಿಂದ ಸಾವು ಸಂಭವಿಸುತ್ತದೆ. ಬಚಾವಾಗಬೇಕು, ಎಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಬುಡಕಟ್ಟು ಸಮುದಾಯದ ಜನರು ಮನೆಗಳನ್ನೇ ಖಾಲಿ ಮಾಡಿಕೊಂಡು ಓಡಿಹೋಗಿದ್ದಾರೆ.
ಕಾಲಾಕೋಟ್, ಬಿರ್ಯಾಖೇಡಿ ಗ್ರಾಮಗಳಲ್ಲಿನ ಕಂಜಾರ್ ಸಮುದಾಯದ ಜನರ ಪ್ರಕಾರ ಕೊರೊನಾ ತಡೆ ಲಸಿಕೆ ಮಾರಣಾಂತಿಕ, ಇಲ್ಲವೇ ನಪುಂಸಕತ್ವಕ್ಕೆ ಕಾರಣವಾಗುತ್ತದೆಯಂತೆ.
ಹಲವಾರು ಬಾರಿ ಆರೋಗ್ಯ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ, ಕೋವಿಡ್-19 ಸೋಂಕು, ಲಸಿಕೆ, ಮಾಸ್ಕ್ ಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಿದ್ದೂ ಬುಡಕಟ್ಟು ಜನರು ನಂಬುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತರು ಅಸಹಾಯಕತೆ ತೋಡಿಕೊಂಡಿದ್ದಾರೆ.
ರೈತರ ಮಕ್ಕಳಿಗೆ ಕೃಷಿ ಇಲಾಖೆಯಿಂದ ಗುಡ್ ನ್ಯೂಸ್: ಉನ್ನತ ಶಿಕ್ಷಣ ಪ್ರೋತ್ಸಾಹಕ್ಕೆ ಶಿಷ್ಯವೇತನ
ಮಾಂಸ, ಮದ್ಯವೇ ಮದ್ದು: ಬುಡಕಟ್ಟು ಜನರ ನಂಬಿಕೆ ಪ್ರಕಾರ ಅವರು ಯಥೇಚ್ಛವಾಗಿ ಮಾಂಸ, ಮದ್ಯಗಳನ್ನು ಸೇವಿಸುವುದರಿಂದ ಕೊರೊನಾ ವೈರಾಣು ಅವರನ್ನ ಬಾಧಿಸಲ್ಲವಂತೆ. ಸರ್ಕಾರದಿಂದ ದಿನಸಿ ಸಿಗದಿದ್ದರೂ ಪರವಾಗಿಲ್ಲ, ಲಸಿಕೆ ಮಾತ್ರ ಬೇಡ ಎನ್ನುವುದು ಅವರ ವಾದವಾಗಿದೆ.