ಓವಲ್: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 23 ಸಾವಿರ ರನ್ ಗಳಿಸಿದ ವಿರಾಟ್ ಕೊಹ್ಲಿ ಅತಿವೇಗದ ರನ್ ಗಳಿಕೆಯಲ್ಲಿ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ 490 ನೇ ಪಂದ್ಯದಲ್ಲಿ 23,000 ರನ್ ಗಳಿಸಿದ್ದಾರೆ. ಇದುವರೆಗೆ 7 ಮಂದಿ ಕ್ರಿಕೆಟಿಗರು 23 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದು, ಪಂದ್ಯಗಳನ್ನು ಗಮನಿಸುವುದಾದರೆ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಅವರು ವೇಗವಾಗಿ ಅಂದರೆ 490 ಪಂದ್ಯ/ಇನಿಂಗ್ಸ್ ಗಳಲ್ಲಿ 23 ಸಾವಿರ ರನ್ ಗಳಿಸಿದ್ದಾರೆ. 70 ಶತಕಗಳು 115 ಅರ್ಧ ಶತಕಗಳು ಸಿಡಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 7675 ರನ್ ಗಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ 572 ಪಂದ್ಯ/ಇನಿಂಗ್ಸ್ ಗಳಲ್ಲಿ 23,000 ರನ್ ಗಳಿಸಿದ್ದು, ರಿಕಿ ಪಾಂಟಿಂಗ್ 544 ಪಂದ್ಯಗಳಲ್ಲಿ ಜಾಕ್ ಕಾಲಿಸ್ 551, ಕುಮಾರ ಸಂಗಕ್ಕಾರ 568, ರಾಹುಲ್ ದ್ರಾವಿಡ್ 576 ಹಾಗೂ ಮಹೇಲಾ ಜಯವರ್ಧನೆ 645 ಪಂದ್ಯ/ ಇನಿಂಗ್ಸ್ ಗಳಲ್ಲಿ 23,000 ರನ್ ಗಳಿಸಿದ್ದಾರೆ.