ನೋಡಲು ಆಕರ್ಷಕ ಎಂದೆನಿಸಿದರೂ ಸ್ವಲ್ಪಮಟ್ಟಿಗೆ ಭಯಹುಟ್ಟಿಸುವ ವಿಡಿಯೋವೊಂದು ಸದ್ಯ ಆನ್ ಲೈನ್ ನಲ್ಲಿ ಭಾರಿ ಸದ್ದು ಮಾಡಿದೆ. ಒಬ್ಬ ವ್ಯಕ್ತಿಯು ಬೃಹತ್ ರೈನ್ ಬೋ ಹಾವನ್ನು ತನ್ನ ದೇಹಕ್ಕೆ ಸುತ್ತುವರಿಸಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದ ಸ್ಥಾಪಕರಾದ ಜೇ ಬ್ರೂವರ್ ನಿರ್ವಹಿಸುತ್ತಿರುವ ಇನ್ಸ್ಟಾಗ್ರಾಂ ಪುಟದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ರೈನ್ ಬೋ (ಮಳೆಬಿಲ್ಲು) ಹಾವು, ವಿಶ್ವದ ಅತ್ಯಂತ ಸುಂದರ ಹಾವುಗಳಲ್ಲಿ ಒಂದಾಗಿದೆ. ಸೂರ್ಯನ ಪ್ರಕಾಶಕ್ಕೆ ಆಕೆ ಹೊಳೆಯುವುದು ನೋಡಿದರೆ ನಂಬಲಾರದಂತಿದೆ. ನಾನು ಹೊಂದಿದ್ದ ಅತ್ಯುತ್ತಮ ಹಾವು ಕೂಡ ಇದಾಗಿದೆ. ಹೀಗಾಗಿ ಕಣ್ಣು ಮುಚ್ಚಿಕೊಂಡು ಮಲಗಿದ್ದ ಸ್ನೇಹಿತನ ಮೇಲೆ ಹಾಕಲು ಇದನ್ನು ಕರೆತರುವಂತೆ ಕೇಳಿದಾಗ ನಾವು ಅದನ್ನು ನೆರವೇರಿಸಿದೆವು” ಎಂದು ಬರೆದಿದ್ದಾರೆ.
ಕೋವಿಡ್ ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ
ಪೆಟ್ಟಿಗೆಯಿಂದ ಈ ಸುಂದರವಾದ ಬೃಹತ್ ಹಾವನ್ನು ಹೊರತೆಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಈ ಸರೀಸೃಪವನ್ನು ಇಬ್ಬರು ಮನೆಯೊಳಗೆ ಒಯ್ಯುತ್ತಾರೆ. ನೆಲದ ಮೇಲೆ ಕಣ್ಣುಮುಚ್ಚಿ ಮಲಗಿದ್ದ ವ್ಯಕ್ತಿಯ ಮೇಲೆ ಹಾವನ್ನು ಇಡುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.
https://www.instagram.com/tv/CTR9lLRhT6D/?utm_source=ig_embed&ig_rid=612b113b-a59a-427a-b882-6f029639ae15