ಬೆಂಗಳೂರು: ಚಾಮರಾಜನಗರ ಜಿಲ್ಲಾಡಳಿತದ ಬೆನ್ನಲ್ಲೇ ಮಂಡ್ಯ ಜಿಲ್ಲೆ ಮಳವಳ್ಳಿ ತಹಶಿಲ್ದಾರ್ ಹೊರಡಿಸಿದ್ದ ನೋ ವ್ಯಾಕ್ಸಿನ್, ನೋ ರೇಷನ್ ಆದೇಶದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ನಿಬಂಧನೆಗಳನ್ನು ಹೇರುವಂತಿಲ್ಲ ಎಂದು ಸೂಚಿಸಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಟೀಕೆಗೆ ಗುರಿಯಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ, ಅಂತಹ ಆದೇಶ ಹೊರಡಿಸುವಂತಿಲ್ಲ ಎಂದು ತಿಳಿಸಿದ್ದರು. ಆದಾಗ್ಯೂ ಇಂದು ಮಳವಳ್ಳಿ ತಹಶೀಲ್ದಾರ್ ಎಂ.ವಿಜಯಣ್ಣ ವ್ಯಾಕ್ಸಿನ್ ಪ್ರಮಾಣ ಪತ್ರ ತೋರಿಸಿದರೆ ಮಾತ್ರ ಪಡಿತರ ವಿತರಣೆ ಮಾಡುವುದಾಗಿ ಆದೇಶ ಹೊರಡಿಸಿ ಗ್ರಾಮಗಳಲ್ಲಿ ಅನೌನ್ಸ್ ಮಾಡಿದ್ದರು. ತಹಶೀಲ್ದಾರ್ ಆದೇಶ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಅಧಿಕೃತ ಸೂಚನೆ ನೀಡಿದೆ.
BIG NEWS: ದೂರಶಿಕ್ಷಣ ಕೋರ್ಸ್ ನಡೆಸಲು UGC ಯಿಂದ 11 ವಿವಿ ಗಳಿಗೆ ಅನುಮತಿ
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅಧಿಸೂಚನೆ ಪ್ರಕಟಿಸಿದ್ದು, ಕೋವಿಡ್ ಲಸಿಕೆ ಎಲ್ಲರಿಗೂ ವಿತರಿಸಬೇಕು ಎಂಬ ಉದ್ದೇಶದಿಂದ ಸಾರ್ವಜನಿಕರಿಗೆ ಲಸಿಕೆ ಹಾಕಿಸಿಕೊಳ್ಳಲೇಬೇಕು ಎಂದು ನಿಬಂಧನೆ ಹೇರುವಂತಿಲ್ಲ. ಯಾವುದೇ ಯೋಜನೆಗೆ ಲಸಿಕಾ ಕಾರ್ಯಕ್ರಮ ಜೋಡಿಸಿದ್ದರೆ ಅದನ್ನು ಕೈಬಿಡುವಂತೆ ಸೂಚಿಸಿದ್ದಾರೆ.