alex Certify ʼಆಪ್‌ʼ ಬಿಡುಗಡೆ ಮಾಡುವ ವೇಳೆ ಯೋಗ ಮಾಡಿದ ಸಚಿವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಪ್‌ʼ ಬಿಡುಗಡೆ ಮಾಡುವ ವೇಳೆ ಯೋಗ ಮಾಡಿದ ಸಚಿವರು

ನವದೆಹಲಿ: ವೃತ್ತಿಪರರಿಗಾಗಿ ಕೇಂದ್ರ ಆಯುಷ್ ಸಚಿವಾಲಯ ಇಂದು ‘ವೈ-ಬ್ರೇಕ್’ ಆಪ್ ಬಿಡುಗಡೆ ಮಾಡಿದೆ. ಕೇವಲ 5 ನಿಮಿಷಗಳಲ್ಲಿ ಮಾಡಬಹುದಾದ ಸರಳ ಯೋಗಾಸನಗಳ ಮೂಲಕ ಕೆಲಸ ಮಾಡುವವರಿಗೆ ರಿಪ್ರೆಶ್ ಆಗಲು ಹಾಗೂ ಗಮನಹರಿಸಲು ಜನರಿಗೆ ಸಹಾಯ ಮಾಡುವ ಉದ್ದೇಶವನ್ನು ಈ ಆಪ್ ಹೊಂದಿದೆ.

ಈ ನೂತನ ಆಪ್ ಅನ್ನು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನಾವಾಲ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹಾಜರಿದ್ದರು. ವಿಡಿಯೋವನ್ನು ಹಂಚಿಕೊಂಡ ರಿಜಿಜು, ಜನರು ತಮ್ಮ ಆರೋಗ್ಯವನ್ನು ಲಘುವಾಗಿ ಪರಿಗಣಿಸದಂತೆ ಕೇಳಿಕೊಂಡರು. “ಆರೋಗ್ಯವನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ. ಪ್ರತಿಯೊಬ್ಬರೂ ಫಿಟ್ ಮತ್ತು ಆರೋಗ್ಯವಾಗಿರಬೇಕು, ವಿಶೇಷವಾಗಿ ಕೆಲಸ ಮಾಡುವವರು. ಆಯುಷ್ ಸಚಿವಾಲಯವು ಪ್ರಾರಂಭಿಸಿದ ಕೆಲಸದಲ್ಲಿ ಯೋಗ ಬ್ರೇಕ್ ಆಪ್ ಅದ್ಭುತವಾದ ಆಪ್ ಮತ್ತು ಅತ್ಯಂತ ಅನುಕೂಲಕರ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಉಪಯುಕ್ತವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಜಾಲಹಳ್ಳಿ ವಾಯುನೆಲೆ ಮೇಲೆ ಡ್ರೋನ್ ಹಾರಾಟ ಶಂಕೆ; ಆತಂಕದ ವಾತಾವರಣ; ಪೊಲೀಸರಿಂದ ಪರಿಶೀಲನೆ

ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಭಾಗವಹಿಸಿದ್ದರು.

ಸಚಿವ ರಿಜಿಜು ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಮಂತ್ರಿಗಳು ಹಾಗೂ ಪ್ರೇಕ್ಷಕರು ಆಪ್ ನಲ್ಲಿ ಲಭ್ಯವಿರುವ ಕೆಲವು ಆಸನಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...