ಎಮ್ಮೆಯೊಂದು ಅಪರೂಪದ 2 ತಲೆಯ ಕರುವಿಗೆ ಜನ್ಮ ನೀಡಿದ ಬಳಿಕ ರಾಜಸ್ಥಾನದ ಗ್ರಾಮವೊಂದು ಭಾರೀ ಚರ್ಚೆಯಲ್ಲಿದೆ. ಪುರ ಸಿಕ್ರೌಡಾ ಎಂಬ ಗ್ರಾಮದಲ್ಲಿ ಹಸು ಸಾಕಾಣಿಕೆ ಮಾಡುತ್ತಿದ್ದ ಮನೆಯೊಂದರಲ್ಲಿ ಈ ವಿಚಿತ್ರ ಕರು ಜನಿಸಿದೆ. ಈ ಕರುವು 2 ಬಾಯಿ, 2 ಕುತ್ತಿಗೆ, ನಾಲ್ಕು ಕಣ್ಣು ಹಾಗೂ ನಾಲ್ಕು ಕಿವಿಗಳನ್ನು ಹೊಂದಿದೆ. ನಿರೀಕ್ಷೆಯಂತೆ ಈ ವಿಚಿತ್ರ ಕರುವು ಸದ್ಯ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಎಮ್ಮೆಯ ಮಾಲೀಕರು ಈ ಕರುವಿಗೆ ಬಾಟಲಿ ಮೂಲಕ ಹಾಲು ಹಾಗೂ ನೀರುಣಿಸುವ ಮೂಲಕ ಆರೈಕೆ ಮಾಡುತ್ತಿದ್ದಾರೆ. ಸದ್ಯ ಈ ಕರುವು ಸಂಪೂರ್ಣ ಆರೋಗ್ಯವಾಗಿದ್ದು ತನ್ನ ಎರಡೂ ಬಾಯಿಗಳ ಮೂಲಕ ಹಾಲನ್ನು ಕುಡಿಯುವ ಸಾಮರ್ಥ್ಯ ಹೊಂದಿದೆ.
ಪಶು ವೈದ್ಯಾಧಿಕಾರಿ ಗುಡ್ಡೆ ಸಿಂಗ್ ಈ ವಿಚಾರವಾಗಿ ಮಾತನಾಡಿದ್ದು ಯಾವುದೇ ಪಶುವೈದ್ಯರ ಸಹಾಯವಿಲ್ಲದೇ ಈ ಎಮ್ಮೆಯು 2 ತಲೆಯ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಸಾಮಾನ್ಯ ಆರೈಕೆ ಮಾಡಲಾಗ್ತಿದ್ದು ಕರುವು ಆರೋಗ್ಯಕರವಾಗಿಯೇ ಇದೆ. ಆದರೆ ಕರುವು 2 ತಲೆ ಹೊಂದಿರುವ ಕಾರಣಕ್ಕೆ ಚರ್ಚೆಯ ವಿಷಯವಾಗಿದೆ ಎಂದು ಹೇಳಿದ್ರು.