ದೇಶದ ನಿರುದ್ಯೋಗದ ಪ್ರಮಾಣವು ಆಗಸ್ಟ್‌ನಲ್ಲಿ 8.32% ತಲುಪಿದೆ. ಜುಲೈನಲ್ಲಿ 6.95%ದಷ್ಟಿದ್ದ ನಿರುದ್ಯೋಗದ ಪ್ರಮಾಣದಲ್ಲಿ ಕಳೆದ ತಿಂಗಳು ಏರಿಕೆ ಕಂಡುಬಂದಿದೆ.
ಇದೇ ವೇಳೆ ನಗರ ಪ್ರದೇಶದ ನಿರುದ್ಯೋಗ ಪ್ರಮಾಣವು 10%ನಷ್ಟಿದ್ದು, 1.5%ದಷ್ಟು ಏರಿಕೆ ಕಂಡುಬಂದಿದೆ ಎಂದು ಭಾರತೀಯ ಆರ್ಥಿಕತೆ ಸರ್ವೇಕ್ಷಣಾ ಕೇಂದ್ರ (ಸಿಎಂಐಇ)ನ ಮಾಸಿಕ ಉದ್ಯೋಗ ದತ್ತಾಂಶದಿಂದ ತಿಳಿದು ಬಂದಿದೆ.
ಆಗಸ್ಟ್‌ನಲ್ಲಿ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಂಸ್ಥೆಯ ವರದಿ ತಿಳಿಸಿದ್ದು, ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದ ಏಪ್ರಿಲ್‌ನಲ್ಲಿ 70 ಲಕ್ಷ ಉದ್ಯೋಗಗಳು ನಷ್ಟವಾಗಿದ್ದಕ್ಕಿಂತ ಇದು ಎಷ್ಟೋ ವಾಸಿ ಎಂದು ತಿಳಿಸಿದೆ.
ಕೊಲೆ ಮಾಡಿ, ಮೃತ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ ಕ್ರೂರಿಗಳು
ಜುಲೈನಲ್ಲಿ 8.3%ರಷ್ಟಿದ್ದ ನಗರ ಪ್ರದೇಶದ ನಿರುದ್ಯೋಗ ದರವು, ಜೂನ್‌ನಲ್ಲಿ 10.07%, ಮೇನಲ್ಲಿ 14.73% ಹಾಗೂ ಏಪ್ರಿಲ್‌ನಲ್ಲಿ 9.78%ದಷ್ಟಿತ್ತು. ಕೋವಿಡ್ ಎರಡನೇ ಅಲೆ ಅಪ್ಪಳಿಸುವ ಮುನ್ನ ದೇಶದ ನಿರುದ್ಯೋಗ ಪ್ರಮಾಣವು 7.27%ದಷ್ಟಿತ್ತು.
ಆಗಸ್ಟ್‌ನಲ್ಲಿ ಬಿತ್ತನೆ ಕಾರ್ಯ ಮಂಕಾದ ಕಾರಣ ಗ್ರಾಮೀಣ ಪ್ರದೇಶದ ನಿರುದ್ಯೋಗದ ಪ್ರಮಾಣವು 7.34%ಕ್ಕೇರಿದೆ. ಜುಲೈನಲ್ಲಿ ಇದೇ ಅಂಕಿಅಂಶವು 6.34%ನಲ್ಲಿತ್ತು.
ಕಳೆದ ಕೆಲ ವರ್ಷಗಳಿಂದ ನಿರುದ್ಯೋಗ ಸಮಸ್ಯೆ ಉಲ್ಪಣಗೊಂಡಿರುವ ದೇಶದಲ್ಲಿ ಕೋವಿಡ್ ಸಾಂಕ್ರಮಿಕದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಆರ್ಥಿಕತೆ ಮರಳಿ ಹಳಿಗೆ ಬರುವ ಸೂಚನೆಗಳು ಕಂಡುಬಂದರೂ ಸಹ ಉದ್ಯೋಗ ಮಾರುಕಟ್ಟೆ ಮಾತ್ರ ನಿಂತ ನೀರಿನಂತಾಗಿದೆ.
ಜುಲೈನಲ್ಲಿ 1.5 ಕೋಟಿ ಮಂದಿ ಕೆಲಸಕ್ಕೆ ಸೇರಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಕಡಿಮೆ ಉತ್ಪಾದಕತೆ ಕಾಣುವ ಕೃಷಿ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಸೇರಿದ್ದಾರೆ.