ಸಂಪುಟದ ಅಗ್ರ ಹುದ್ದೆಗಳನ್ನು ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಹಂತಗಳಲ್ಲೂ ಮಹಿಳೆಯರು ಕೆಲಸ ಮಾಡಬಹುದು ಎಂದು ತಾಲಿಬಾನ್ನ ಅಫ್ಘಾನಿಸ್ತಾನದ ಹಿರಿಯ ನಾಯಕ ಮುಲ್ಲಾ ಬರದಾರ್ ತಿಳಿಸಿದ್ದಾನೆ.
ಈ ಮುನ್ನ ಮಹಿಳೆಯರನ್ನೂ ಸೇರಿ ಸರ್ಕಾರದ ಎಲ್ಲಾ ಅಧಿಕಾರಿಗಳನ್ನು ಕೆಲಸಕ್ಕೆ ಹಿಂದಿರುಗಲು ತಾಲಿಬಾನ್ ಆಹ್ವಾನಿಸಿತ್ತು. ಶರಿಯಾ ಕಾನೂನಿನಂತೆ ಮಹಿಳೆಯರನ್ನು ಗೌರವಿಸಲಾಗುವುದು ಎನ್ನುತ್ತಾ ಬಂದಿರುವ ತಾಲಿಬಾನ್, ಇದೇ ಕಾನೂನನ್ನು ಹೇಗೆ ಅರ್ಥೈಸುತ್ತದೆ ಎಂದು ಸ್ಪಷ್ಟವಾಗಿ ವಿವರಿಸಿಲ್ಲ.
ಮರು ಬಿಡುಗಡೆಯಾಗುತ್ತಿದೆ ’ಟಗರು’
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ತಾವು ಕೆಲಸಕ್ಕೆ ಮರಳಿದ್ದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಮತಿ ಕೊಡುವುದಾಗಿ ತಿಳಿಸಿದ್ದ ತಾಲಿಬಾನ್, ಸಹ-ಶಿಕ್ಷಣಕ್ಕೆ ಆಸ್ಪದವಿಲ್ಲ ಎಂದು ಸ್ಪಷ್ಟಪಡಿಸಿದ ಕಾರಣ ಶೈಕ್ಷಣಿಕ ಸಂಸ್ಥೆಗಳಿಗೆ ಪುರುಷರು ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ಮೂಲ ಸೌಕರ್ಯ ಒದಗಿಸಲು ಸಂಪನ್ಮೂಲಗಳ ಕೊರತೆ ಬಾಧಿಸುತ್ತಿದೆ.