ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕೆಲ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ನಲ್ಲಿ ಅಧ್ಬುತ ಪ್ರದರ್ಶನ ನೀಡಿದ್ದಾರೆ. ಕೆ ಎಲ್ ರಾಹುಲ್ ಎರಡು ವರ್ಷಗಳ ನಂತರ ಟೆಸ್ಟ್ ಉತ್ತಮ ಪ್ರದರ್ಶನ ನೀಡಿ, ಸ್ಥಾನ ಗಟ್ಟಿಗೊಳಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಹಾಗೂ ರಾಹುಲ್ ಜೋಡಿ ಇನ್ನೂ ಅನೇಕ ಟೆಸ್ಟ್ ಗಳನ್ನು ಒಟ್ಟಿಗೆ ಆಡುವ ಭರವಸೆ ಮೂಡಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಅನೇಕ ಆರಂಭಿಕ ಆಟಗಾರರಿದ್ದಾರೆ. ಕೆ.ಎಲ್.ರಾಹುಲ್ ಈ ಸ್ಥಾನ ಗಟ್ಟಿಗೊಳಿಸುತ್ತಿದ್ದಂತೆ ಕೆಲ ಆಟಗಾರರಿಗೆ ಸಮಸ್ಯೆ ಶುರುವಾಗಿದೆ. ಅದ್ರಲ್ಲಿ ಮಯಾಂಕ್ ಅಗರ್ವಾಲ್ ಕೂಡ ಸೇರಿದ್ದಾರೆ.
ಭಾರತೀಯ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್‌ವಾಲ್ ಆತ್ಮೀಯ ಸ್ನೇಹಿತರು. ಇಬ್ಬರು ಆರಂಭಿಕ ಬ್ಯಾಟ್ಸ್ ಮೆನ್. ಲಾರ್ಡ್ಸ್ ಟೆಸ್ಟ್ ನಲ್ಲಿ ರಾಹುಲ್, ಅದ್ಭುತ ಶತಕ ಸಿಡಿಸಿದ್ದಾರೆ. ಮೂರು ಪಂದ್ಯಗಳಲ್ಲಿ 252 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಅರ್ಧ ಶತಕ ಸೇರಿವೆ. ರಾಹುಲ್ ಈ ಪ್ರದರ್ಶನ ಸ್ನೇಹಿತ ಮಯಾಂಕ್ ಅಗರ್ವಾಲ್ ಗೆ ಮುಳುವಾಗಿದೆ.
ಸರಣಿಗೆ ಮುಂಚೆ, ಶುಬ್ಮನ್ ಗಿಲ್ ಗಾಯಗೊಂಡು ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದರು. ಟೆಸ್ಟ್ ಗೂ ಮುನ್ನ ಮಯಾಂಕ್ ಅಗರ್ವಾಲ್ ಗಾಯಗೊಂಡು ಹೊರಗುಳಿದ್ರು. ಈ ಅವಕಾಶವನ್ನು ರಾಹುಲ್ ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ರಾಹುಲ್-ಶರ್ಮಾ ಜೋಡಿಯ ಪ್ರದರ್ಶನ ಉತ್ತಮವಾಗಿದ್ದು, ಸದ್ಯ ಈ ಜೋಡಿ ಬೇರ್ಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅಗರ್ವಾಲ್ ಟೆಸ್ಟ್ ಕ್ರಿಕೆಟ್ ದಾರಿ ಬಹುತೇಕ ಮುಚ್ಚಿದಂತೆ ಎನ್ನಲಾಗ್ತಿದೆ.