ಮುಂಬೈನ ಐಕಾನಿಕ್ ವಡಾ-ಪಾವ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಫಾಸ್ಟ್ ಫುಡ್. ಇದೀಗ ವಡಾ-ಪಾವ್ ದುಬಾಯ್‌ನಲ್ಲೂ ಜನಪ್ರಿಯವಾಗಿದೆ.
ಮೊದಲೇ ಚಿನ್ನದ ಮಾರುಕಟ್ಟೆಗಳಿಂದ ಮೆರುಗುವ ದುಬಾಯ್‌ನ ಸ್ವಭಾವಕ್ಕೆ ತಕ್ಕಂತೆ ವಡಾ-ಪಾವ್ ಸಹ ಮದುವಣಗಿತ್ತಿಯಂತೆ ಚಿನ್ನದ ಕೋಟಿಂಗ್‌ನಲ್ಲಿ ಮಿಂಚುತ್ತಿರುವ ವಿಚಾರವೊಂದು ಸದ್ದು ಮಾಡಿದೆ.
ಜಗತ್ತಿನಲ್ಲೇ ಮೊದಲ ಬಾರಿಗೆ 22-ಕ್ಯಾರೆಟ್ ಚಿನ್ನದ ವಡಾ-ಪಾವ್ ಅನ್ನು ದುಬಾಯ್‌ನ ಕರಾಮಾದಲ್ಲಿರುವ ಓ’ಒಆವ್ ರೆಸ್ಟೋರೆಂಟ್ ಪರಿಚಯಿಸಿದೆ.
ರೆಸ್ಟೋರೆಂಟ್‌ನಲ್ಲಿ ಮಾತ್ರವೇ ತಿನ್ನಲು ಅವಕಾಶವಿರುವ ಈ ವಡಾ-ಪಾವ್ ಬೆಲೆಯು 99 ದಿರ್ಹಮ್ (2000 ರೂಪಾಯಿ) ಆಗುತ್ತದೆ.
GOOD NEWS: ಇನ್ಮುಂದೆ ಈ ಕಂಪನಿಗಳೂ ನೀಡಲಿವೆ ಸಾಲ ಸೌಲಭ್ಯ
ಆಲೂಗೆಡ್ಡೆಯ ಸಿಹಿ ಫ್ರೈಸ್ ಹಾಗೂ ಮಿಂಟ್ ಲೆಮನೇಡ್ ಜೊತೆಗೆ ಮರದ ಡಬ್ಬವೊಂದರಲ್ಲಿ ಸರ್ವ್ ಮಾಡಲಾದ ಈ ಗೋಲ್ಡನ್ ವಡಾ-ಪಾವ್‌ನ ಚಿತ್ರವನ್ನು ಮಸ್ರಾತ್ ದೌದ್ ಎಂಬ ನೆಟ್ಟಿಗರೊಬ್ಬರು ಶೇರ್ ಮಾಡಿದ್ದಾರೆ.
ಖಲೀಜ್ ಟೈಮ್ಸ್ ವರದಿ ಪ್ರಕಾರ ಈ ವಡಾ-ಪಾವ್‌ನಲ್ಲಿ ಚೀಸ್ ಹಾಗೂ ಫ್ರೆಂಚ್ ಟ್ರಫಲ್ ಬೆಣ್ಣೆ ಇದ್ದು, ಪಾವ್ ಮೇಲೆ ಮಯೋನೀಸ್ ಅನ್ನು ಸವರಲಾಗಿದೆ. ಆಲೂಗೆಡ್ಡೆ ವಡೆಯನ್ನು ಫ್ರಾನ್ಸ್‌ನಿಂದ ಆಮದು ಮಾಡಲಾದ 22-ಕ್ಯಾರೆಟ್ ಚಿನ್ನದ ಎಲೆಗಳಿಂದ ಸುತ್ತಲಾಗಿದೆ.