alex Certify ಕಾಬೂಲ್‍ ನಲ್ಲಿನ ಭಾರತದ ರಾಯಭಾರ ಕಚೇರಿಯನ್ನ ಹಗಲಿರುಳು ರಕ್ಷಿಸಿದ್ದು ಈ ಮೂರು ಶ್ವಾನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್‍ ನಲ್ಲಿನ ಭಾರತದ ರಾಯಭಾರ ಕಚೇರಿಯನ್ನ ಹಗಲಿರುಳು ರಕ್ಷಿಸಿದ್ದು ಈ ಮೂರು ಶ್ವಾನಗಳು

ತಾಲಿಬಾನ್ ಉಗ್ರರ ದಾಳಿಯಿಂದ ಕಾಬೂಲ್‍ನಲ್ಲಿನ ಭಾರತದ ರಾಯಭಾರ ಕಚೇರಿಯನ್ನ ರಕ್ಷಿಸುತ್ತಿದ್ದ ತರಬೇತಿ ಪಡೆದ ಸ್ನಿಫ್ಫರ್ ನಾಯಿಗಳಾದ ಮಾಯಾ, ಬಾಬ್ಬಿ ಮತ್ತು ರೂಬಿಯನ್ನು ಸುರಕ್ಷಿತವಾಗಿ ತವರಿಗೆ ಕರೆತರಲಾಗಿದೆ.

ಜನಸಾಮಾನ್ಯರಿಗೆ ಬಿಗ್ ಶಾಕ್: ಸಾವಿರ ರೂ. ಸನಿಹಕ್ಕೆ ಸಿಲಿಂಡರ್…? LPG ದರ ಪರಿಷ್ಕರಣೆ, ಆಧಾರ್ ಜೋಡಣೆ ಸೇರಿ ಇಂದಿನಿಂದ ನಿಮ್ಮ ಜೀವನದಲ್ಲಿ ಬದಲಾವಣೆ ತರಲಿವೆ ಈ ನಿಯಮ

ಅವುಗಳನ್ನು ದಿಲ್ಲಿಯಲ್ಲಿನ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸೇನಾನೆಲೆಯಲ್ಲಿ ನಿಯೋಜಿಸಲಾಗಿದೆ. ಭಾರಿ ಚುರುಕಾದ ಈ ನಾಯಿಗಳನ್ನು ಸೇನಾ ವಿಮಾನದಲ್ಲಿ ಗುಜರಾತಿನ ಜಾಮ್‍ನಗರಕ್ಕೆ ಇತ್ತೀಚೆಗೆ ಕರೆತರಲಾಗಿತ್ತು.

ರಾಯಭಾರ ಕಚೇರಿಯೊಳಗೆ ತರಲಾಗುತ್ತಿದ್ದ ದಿನಸಿ, ತರಕಾರಿಗಳನ್ನು ಚೆನ್ನಾಗಿ ಮೂಸುತ್ತಿದ್ದ ಈ ನಾಯಿಗಳು ವಿಷ ಬೆರಕೆ ಅಥವಾ ಸ್ಫೋಟಕಗಳ ಅಳವಡಿಕೆಯನ್ನು ಪರಿಶೀಲಿಸುತ್ತಿದ್ದವಂತೆ. ಹಲವಾರು ಐಇಡಿಗಳನ್ನು ಕೂಡ ಕಾಬೂಲ್‍ನಲ್ಲಿ ಪತ್ತೆ ಮಾಡಲು ಈ ನಾಯಿಗಳು ನೆರವಾಗಿದ್ದು, ನೂರಾರು ಜನರ ಪ್ರಾಣ ರಕ್ಷಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...