2020-21 ನೇ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಗಳನ್ನು ಶೀಘ್ರವೇ ಸಲ್ಲಿಸಲು ಐಟಿ ಇಲಾಖೆ ಸೂಚಿಸಿದ್ದು, ಸಲ್ಲಿಕೆಯಾದ ಅರ್ಜಿಗಳ ಪೈಕಿ ಇದುವರೆಗೂ 93% ಕ್ಲೇಮ್ ಗಳನ್ನು(ಐಟಿಆರ್) ಕ್ಲಿಯರ್ ಮಾಡಲಾಗಿದೆ ಎಂದು ತಿಳಿಸಿದೆ.
ಕಳೆದ ವಾರ ಕೂಡ 15,269 ಕೋಟಿ ರೂ. ಮೊತ್ತದ ರೀಫಂಡ್ಸ್ ಕ್ಲಿಯರ್ ಮಾಡಲಾಗಿದ್ದು ಶೀಘ್ರವೇ ತೆರಿಗೆದಾರರ ಖಾತೆಗೆ ಜಮೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಇಲ್ಲಿದೆ ದಿನಗೂಲಿ ನೌಕರನ ಪುತ್ರ 2000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ಕಥೆ
ಕ್ಲಿಯರ್ ಆಗದೇ ಉಳಿದ ಕ್ಲೇಮ್‍ಗಳ ಇತ್ಯರ್ಥಕ್ಕಾಗಿ ಶೀಘ್ರವೇ ಆನ್‍ಲೈನ್ ಮೂಲಕ ನಿಮ್ಮ ರಿಟರ್ನ್ಸ್ ಗಳ ಬಗ್ಗೆ ಪರಿಶೀಲಿಸಿ ಎಂದು ಜನರಿಗೆ ಇಲಾಖೆ ಸೂಚಿಸಿದೆ. ಕೆಲವು ಹೆಚ್ಚಿನ ದಾಖಲೆಗಳನ್ನು ಕೇಳಲಾಗಿರುತ್ತದೆ, ಇಲ್ಲವೇ ಬ್ಯಾಂಕ್ ಖಾತೆ ಸರಿಯಾಗಿ ನಮೂದಿಸಲಾಗಿರುವುದಿಲ್ಲ. ಇಂಥ ಸಣ್ಣ ಸಂಶಯಗಳನ್ನು ನಿವಾರಿಸಿಕೊಂಡು ರಿಟರ್ನ್ಸ್ ಗಳನ್ನು ಶೀಘ್ರ ಪಡೆದುಕೊಳ್ಳಲು ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.