ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿತ್ತು. ಅರಣ್ಯದ ಬಳಿಯಿದ್ದ ಹಲವು ಪ್ರದೇಶಗಳ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ದೌಡಾಯಿಸುತ್ತಿದ್ದರು.
ಇದರಿಂದಾಗಿ ಸೌತ್ ಲೇಕ್ ತಾಹೊಯಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ನಡುವೆ, ನಿಂತುಕೊಂಡಿದ್ದ ಕಾರುಗಳ ಸರತಿ ಸಾಲಿನ ಪೈಕಿ ಒಂದರಿಂದ ಇಳಿದ ವೃದ್ಧ ಮೆಲ್ ಸ್ಮೋತರ್ಸ್ ಕೈಯಲ್ಲಿ ಪಿಟೀಲು ಇತ್ತು.
ಅನಾಮಧೇಯ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬಂದಿದೆ 3,377 ಕೋಟಿ ರೂ. ದೇಣಿಗೆ…!
ಆತ ಆರಾಮಾಗಿ ನಿಂತು ಮನಸ್ಸು ಆತಂಕದಿಂದ ಹೊರಬರಲು ನೆರವಾಗುತ್ತಿದ್ದವನಂತೆ ಪಿಟೀಲು ನುಡಿಸಲು ಶುರುಮಾಡಿದ. ಈ ವಿಡಿಯೊ ಟ್ವಿಟರ್‍ನಲ್ಲಿ ವೈರಲ್ ಆಗಿದೆ. ಬಹಳ ಜನರು ಈ ಸಮಯದಲ್ಲಿ ಟೈಟಾನಿಕ್ ಸಿನಿಮಾ ಜ್ಞಾಪಿಸಿಕೊಂಡಿದ್ದಾರೆ.
ಹಡಗು ಮುಳುಗುತ್ತಿದ್ದಾಗ, ಅದರಲ್ಲಿನ ವಾದ್ಯಗೋಷ್ಠಿಯು ತನ್ನ ಕೊನೆಯ ಪ್ರದರ್ಶನ ಎಂಬಂತೆ ಸಂಗೀತ ನುಡಿಸುತ್ತಿದ್ದ ದೃಶ್ಯ ಕಣ್ಮುಂದೆ ಬಂದಿದೆ.
https://www.youtube.com/watch?v=Ld-PAx9iqjE