ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಪಿಯು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದಿಢೀರ್ ಶುಲ್ಕದ ಹೊರೆ ಎದುರಾಗಿದೆ. ದುಬಾರಿ ಶುಲ್ಕದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತತ್ತರಿಸಿಹೋಗಿದ್ದಾರೆ.
ಕೊರೋನಾ ಕಾರಣದಿಂದ ಈ ಬಾರಿ ಪರೀಕ್ಷೆಯಲ್ಲಿ ಬದಲಾವಣೆಯಾಗಿದೆ. ಫಲಿತಾಂಶದಲ್ಲಿ ಕೂಡ ಬದಲಾವಣೆಯಾಗಿದ್ದು, ಈ ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ಆದರೆ, ಖಾಸಗಿ ಪಿಯುಸಿ ಮತ್ತು ಪದವಿ ಕಾಲೇಜುಗಳಲ್ಲಿ ಶುಲ್ಕವನ್ನು ಶೇಕಡ 40 ರಷ್ಟು ಏರಿಕೆ ಮಾಡಿರುವುದರಿಂದ ಪೋಷಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಪ್ರತಿಷ್ಠಿತ ಪಿಯು ಕಾಲೇಜುಗಳಲ್ಲಿ ಕಾಮರ್ಸ್ ಕೋರ್ಸ್ ಗಳಿಗೆ 95 ಸಾವಿರ ರೂ.ನಿಂದ 1.35 ಲಕ್ಷ ರೂಪಾಯಿವರೆಗೆ ಶುಲ್ಕವಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಪ್ರಥಮ ವರ್ಷದ ಮೊದಲ ವರ್ಷದ ಪದವಿ ಶುಲ್ಕವನ್ನು ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಶುಲ್ಕ ಏರಿಕೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.