ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ವ್ಯಾಪಾರಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂಜಿತ್ ಸಿಂಗ್(22) ಮತ್ತು ಪೃಥ್ವಿರಾಜ್ ಸಿಂಗ್(31) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಆಗಸ್ಟ್ 17 ರಂದು 9 ಗಂಟೆ ಸುಮಾರಿಗೆ ಪ್ರಿಯದರ್ಶಿನಿ ಟೆಕ್ಸ್ ಟೈಲ್ ಮಾಲೀಕ ಮೂಲಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು.
2018 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ ಕಲ್ಯಾಣ್ ಸಿಂಗ್ ಹತ್ಯೆ ನಡೆದಿದ್ದು, ಈ ಪ್ರಕರಣದಲ್ಲಿ ಮೂಲಸಿಂಗ್ ಆರೋಪಿಯಾಗಿದ್ದ. ಮೂಲಸಿಂಗ್ ಅವರನ್ನು ಕಲ್ಯಾಣ್ ಸಿಂಗ್ ಪುತ್ರ ಸಂಜಿತ್ ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾನೆ,
ಮೂಲಸಿಂಗ್ ಹತ್ಯೆ ಮಾಡಿದ ಸಂಜಿತ್ ಸಿಂಗ್ ಹಾಗೂ ಪೃಥ್ವಿರಾಜ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಮಾಹಿತಿ ನೀಡಿದ್ದಾರೆ.