ಮುಂಬೈ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮತ್ತೊಂದು ಹೊಸ ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಆರು ತಿಂಗಳಲ್ಲಿ ಜೈವಿಕ ಇಂಧನ ವಾಹನ ತಯಾರಿಕೆಯನ್ನು ಕಡ್ಡಾಯಗೊಳಿಸಲಾಗುವುದು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದು, ಇನ್ನು ಆರು ತಿಂಗಳಲ್ಲಿ ಜೈವಿಕ ಇಂಧನ ಬಳಕೆ ಮಾಡಿ ಚಲಿಸುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದನ್ನು ಆಟೋಮೊಬೈಲ್ ಕಂಪನಿಗಳಿಗೆ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಹಕರಿಗೆ ಕಡಿಮೆ ಹೊರೆಯಾಗುವ ಜೈವಿಕ ಇಂಧನ ಬಳಕೆ ವಾಹನಗಳನ್ನು ಕಡ್ಡಾಯವಾಗಿಸಲು ಕ್ರಮಕೈಗೊಳ್ಳಲಾಗುತ್ತದೆ. ಜೈವಿಕ ಇಂಧನದ ಬೆಲೆ ಕಡಿಮೆ ಇದೆ. ಅದರಿಂದ ಮಾಲಿನ್ಯವೂ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಲ್ಲದೆ, ವಿದೇಶಿ ವಿನಿಮಯ ಉಳಿತಾಯಕ್ಕೂ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಆರು ತಿಂಗಳೊಳಗೆ ಜೈವಿಕ ಇಂಧನ ಬಳಕೆ ಮಾಡುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದನ್ನು ಆಟೋಮೊಬೈಲ್ ಕಂಪನಿಗಳಿಗೆ ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದಾರೆ.