alex Certify ಬರೋಬ್ಬರಿ 100 ಕಿಮೀ ಸೈಕ್ಲಿಂಗ್​ ಮಾಡಿ ವಿಶ್ವ ದಾಖಲೆ ನಿರ್ಮಿಸಿದ 6ರ ಪೋರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 100 ಕಿಮೀ ಸೈಕ್ಲಿಂಗ್​ ಮಾಡಿ ವಿಶ್ವ ದಾಖಲೆ ನಿರ್ಮಿಸಿದ 6ರ ಪೋರ…..!

ಚೆನ್ನೈನ ಆರು ವರ್ಷದ ರಿಯಾನ್​ ಕುಮಾರ್​​ ನಾನ್​ ಸ್ಟಾಪ್​​ 100 ಕಿಲೋಮೀಟರ್​ ದೂರದವರೆಗೆ ಸೈಕಲ್​ ಚಲಾಯಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

5 ಗಂಟೆ 17 ನಿಮಿಷದಲ್ಲಿ 108.09 ಕಿಮೀ ಸೈಕ್ಲಿಂಗ್​ ಮಾಡಿದ ವಿಶ್ವದ ವೇಗದ ಹಾಗೂ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂದು ವಿಶ್ವ ದಾಖಲೆ ಪುಸ್ತಕದಲ್ಲಿ ನಮೂದಾಗಿದೆ.
ರಿಯಾನ್​ ಪೋಷಕರು ಭಾರತೀಯ ನೌಕಾ ನೆಲೆಯಲ್ಲಿ ಉದ್ಯೋಗ ಮಾಡುವವರಾಗಿದ್ದು ಕೆಲ ಸಮಯದ ಹಿಂದಷ್ಟೇ ದೆಹಲಿಯಿಂದ ಚೆನ್ನೈಗೆ ಶಿಫ್ಟ್​ ಆಗಿದ್ದರು. ರಿಯಾನ್​ನ ಈ ಸಾಧನೆಗೆ ಅವರ ತಾಯಿ ನಿವೃತ್ತ ಕಮಾಂಡರ್​ ಗೌರಿ ಶರ್ಮಾ ಅವರೇ ಸ್ಪೂರ್ತಿಯಂತೆ.

ತಮ್ಮ ವಿಶ್ವ ದಾಖಲೆ ವಿಚಾರವಾಗಿ ಮಾತನಾಡಿದ ರಿಯಾನ್​, ನಾನು ಸೈಕ್ಲಿಂಗ್​ನಲ್ಲಿ ತುಂಬಾ ಇಷ್ಟ ಪಡೋದು ವೇಗವನ್ನ, ನಾನು ವಾರದಲ್ಲಿ ಮೂರು ದಿನ ಸೈಕ್ಲಿಂಗ್​ ಅಭ್ಯಾಸ ಮಾಡುತ್ತೇನೆ ಹಾಗೂ ಉಳಿದ ದಿನ ಶಕ್ತಿಗೆ ತರಬೇತಿ ಪಡೆಯುತ್ತೇನೆ ಎಂದು ಹೇಳಿದ್ದಾನೆ.

2ನೇ ತರಗತಿಯ ವಿದ್ಯಾರ್ಥಿಯಾದ ಈತ ಪ್ರತಿಷ್ಠಿತ 200 ಕಿಮೀ ಬ್ರೆವೆಟ್ಸ್​​ ಡಿ ರಾಮಡೋನಿಯರ್ಸ್​ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾನೆ. ಫ್ರಾನ್ಸ್​​ನಲ್ಲಿ ವಾರ್ಷಿಕ ಬೈಸಿಕಲ್​ ರೇಸ್​ ಟೂರ್​ ಡಿ ಫ್ರಾನ್ಸ್​​ನಲ್ಲಿ ಭಾಗಿಯಾಗುವುದು ಈ ಬಾಲಕನ ಕನಸಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...