ಇತ್ತೀಚಿನ ದಿನಗಳಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಅನೇಕ ಸುಳ್ಳುಗಳನ್ನು ಹೇಳಿಕೊಂಡು ಮನೆಗೆ ಬರುವ ಅಪರಿಚಿತರು, ಲೂಟಿ ಮಾಡ್ತಿದ್ದಾರೆ. ಸದ್ಯ ಗ್ಯಾಸ್ ರಿಪೇರಿ ಹೆಸರಿನಲ್ಲಿ ಮೋಸ ನಡೆಯುತ್ತಿದೆ. ಹೈದ್ರಾಬಾದ್ ನಲ್ಲಿ ಇಂಥ ಅನೇಕ ಘಟನೆ ನಡೆದಿದೆ.
ಗ್ಯಾಸ್ ರಿಪೇರಿ ಹೆಸರಿನಲ್ಲಿ ಮನೆಗೆ ಬರುವ ವ್ಯಕ್ತಿಗಳು, ಮಹಿಳೆಯೊಬ್ಬರಿಂದ 6 ಸಾವಿರ, ಇನ್ನೊಬ್ಬ ವ್ಯಕ್ತಿಯಿಂದ 3 ಸಾವಿರ ರೂಪಾಯಿ ಪಡೆದಿದ್ದಾರೆ. ಇಷ್ಟೇ ಅಲ್ಲದೆ ಇನ್ನೂ ಅನೇಕರಿಂದ ಹಣ ಪಡೆದಿದ್ದಾರೆಂಬ ವರದಿಯಾಗಿದೆ.
ಗ್ಯಾಸ್ ಏಜೆನ್ಸಿಯಿಂದ ಬಂದಿದ್ದು, ಗ್ಯಾಸ್ ಸಿಲಿಂಡರ್, ಸ್ಟೌವ್ ಪರಿಶೀಲನೆ ಮಾಡಬೇಕೆಂದು ಜನರನ್ನು ನಂಬಿಸುತ್ತಾರೆ. ಮನೆಯೊಳಗೆ ಬರ್ತಿದ್ದಂತೆ, ಒಂದಿಲ್ಲೊಂದು ಕಾರಣ ಹೇಳ್ತಾರೆ. ಸ್ಟೌವ್ ರಿಪೇರಿಗೆ ಇಷ್ಟು ಹಣ ಬೇಕೆಂದು ಬೇಡಿಕೆಯಿಡ್ತಾರೆ. ಸಿಲಿಂಡರ್ ಸ್ಫೋಟದ ಭಯಕ್ಕೆ ಜನರು ಹಣ ನೀಡ್ತಿದ್ದಾರೆ.
ಇಂಥ ವಂಚಕರಿಂದ ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ. ಮನೆ ಬಾಗಿಲಿಗೆ ಇಂಥ ವ್ಯಕ್ತಿ ಬರ್ತಿದ್ದಂತೆ ಮೊದಲು ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ನೀವು ವಿಚಾರಿಸಬೇಕು. ಒಂದು ವೇಳೆ ಗ್ಯಾಸ್ ಏಜೆನ್ಸಿಯಿಂದ ಯಾವುದೇ ವ್ಯಕ್ತಿಯನ್ನು ಕಳಿಸಿಲ್ಲವೆಂದಾದ್ರೆ ಬಂದ ವ್ಯಕ್ತಿಯನ್ನು ಮೊದಲು ಹೊರಗೆ ಕಳುಹಿಸಬೇಕು.
ಸುರಕ್ಷತೆಯ ದೃಷ್ಟಿಯಿಂದ, ಗ್ಯಾಸ್ ಸಂಪರ್ಕ ಮತ್ತು ಸ್ಟೌವ್ ಅನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು. ಅಪ್ಲಿಕೇಶನ್ ಅಥವಾ ಫೋನ್ ಮೂಲಕ ರಿಪೇರಿಯವರನ್ನು ಬುಕ್ ಮಾಡಿ ನೀವು ಕರೆಯಿಸಬಹುದು. ಕಂಪನಿಯ ಉದ್ಯೋಗಿ ಬಂದು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ. ಆಗ ನಿಮ್ಮ ಸ್ಟೌವ್ ಬಗ್ಗೆ ಯಾರೂ ದೂರು ಹೇಳಲು ಸಾಧ್ಯವಾಗುವುದಿಲ್ಲ.