ಬೀದಿ ಬದಿ ವ್ಯಾಪಾರಸ್ಥರು ಅಥವಾ ಮಾರಾಟಗಾರರು ಗ್ರಾಹಕರನ್ನು ಸೆಳೆಯುವುದಕ್ಕಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕೂಗುವುದನ್ನು ನೀವು ಗಮನಿಸಿರಬಹುದು. ಕೆಲವರು ತಮ್ಮ ಉತ್ಪನ್ನಗಳನ್ನು ಮಾರಲು ತಮಾಷೆಯ ಧ್ವನಿಯಲ್ಲಿ ಹೇಳುವ ಮುಖಾಂತರ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಸದ್ಯ ಸಮೋಸಾ-ಕಚೋರಿ ಮಾರಾಟಗಾರರೊಬ್ಬರು ಕೂಗುವ ವಿಡಿಯೋ ಸದ್ಯ ವೈರಲ್ ಆಗಿದೆ.
ವಿಡಿಯೋದಲ್ಲಿ, ಬೈಕ್ ನಲ್ಲಿ ಕುಳಿತಿದ್ದ ಸಮೋಸಾ ಮಾರಾಟಗಾರ, “ಗಲ್ಮಾ-ಗಲಾಮ್ ಸಮೋಸಾಗಳನ್ನು ತೆಗೆದುಕೊಳ್ಳಿ. ಮೋಟು-ಪಟ್ಲುವಿನ ಸಮೋಸಾ ತೆಗೆದುಕೊಳ್ಳಿ” ಅಂತಾ ಒಂದೇ ಉಸಿರಿನಲ್ಲಿ ಗಟ್ಟಿಯಾದ ಧ್ವನಿಯಲ್ಲಿ ಕೂಗಿದ್ದಾರೆ. ಸದ್ಯ ಅಲ್ಲಿದ್ದ ಯಾರೋ ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ಮುಂದೆ ಇಲ್ಲಿ ಸಿಗಲ್ಲ ಮಾಂಸ, ಮದ್ಯ..! ಮಹತ್ವದ ನಿರ್ಧಾರ ಕೈಗೊಂಡ ಯುಪಿ ಸಿಎಂ
ಈ ವಿಡಿಯೋ ಜನರನ್ನು ಸಂಪೂರ್ಣವಾಗಿ ರಂಜಿಸಿದ್ದು, 24 ಸಾವಿರಕ್ಕಿಂತ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ. ವ್ಯಕ್ತಿಯ ಮಾರ್ಕೆಂಟಿಂಗ್ ಕೌಶಲ್ಯವನ್ನು ನೆಟ್ಟಿಗರು ಹೊಗಳಿದ್ದಾರೆ. ಅವನ ತೊದಲುವಿಕೆಯಿಂದಾಗಿ ಅವನಿಗೆ ಸಮೋಸಾ-ಕಚೋರಿಯನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗಿಲ್ಲ ಅಂತೆಲ್ಲಾ ಕೆಲವರು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=swOS2jVm8gE