alex Certify ಬ್ಯಾಂಕಾಕ್ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದಿದೆ ಶಾಕಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕಾಕ್ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದಿದೆ ಶಾಕಿಂಗ್‌ ಸಂಗತಿ

ದಕ್ಷಿಣ ಬ್ಯಾಂಕಾಕ್​​ನ ಸ್ಯಾಮಟ್​​ನಲ್ಲಿರುವ ಫೀಲ್ಡ್​ ಆಸ್ಪತ್ರೆಯಲ್ಲಿ ನಿನ್ನೆ ಅತಿರೇಕದ ಲೈಂಗಿಕತೆ, ಜಗಳ ಹಾಗೂ ಡ್ರಗ್​ ಬಳಕೆ ಮಿತಿಮೀರಿದ ಹಿನ್ನೆಲೆಯಲ್ಲಿ ಪುರುಷ ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಸ್ಯಾಮಟ್​ ಪ್ರಾ ರೌಮಜೈನಲ್ಲಿ 5 ನಿವಾಸವಿದ್ದು ಇಲ್ಲಿ ಸರಿ ಸುಮಾರು 1000ಕ್ಕೂ ಅಧಿಕ ರೋಗಿಗಳು ಕೋವಿಡ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರೋಗಿಗಳು ಸಾಮೂಹಿಕ ಲೈಂಗಿಕ ಕ್ರಿಯೆ, ಮಾದಕ ದ್ರವ್ಯ ವ್ಯಸನ ಹಾಗೂ ಕಿತ್ತಾಟಗಳಲ್ಲೇ ಭಾಗಿಯಾಗಿದ್ದಾರೆ.

ಈ ಪ್ರಕರಣಗಳು ಮಿತಿಮೀರಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಅಕ್ರಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪುರುಷ ವಿಭಾಗ ಹಾಗೂ ಮಹಿಳೆಯರ ವಿಭಾಗ ಎಂದು ರಚಿಸಲು ನಿರ್ಧಾರ ಕೈಗೊಂಡಿದ್ದಾರೆ.

ಈ ಅಕ್ರಮಗಳಲ್ಲಿ ಭಾಗಿಯಾಗಿರುವ ರೋಗಿಗಳು ಮತ್ತೊಮ್ಮೆ ಇಂತಹ ನಡವಳಿಕೆಯನ್ನು ಪುನರಾವರ್ತಿಸಿದಲ್ಲಿ ಅಂತವರನ್ನು ಬೇರೆಯ ವೈದ್ಯಕೀಯ ಚಿಕಿತ್ಸೆ ನೀಡುವ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...