ಆನ್ಲೈನ್ ಗೇಮಿಂಗ್ನಿಂದ ಮಕ್ಕಳ ಮನೋ-ಬೌದ್ಧಿಕ ಬೆಳವಣಿಗೆ ಮೇಲೆ ಆಗುತ್ತಿರುವ ಪರಿಣಾಮದ ವಿರುದ್ಧ ಕ್ರಮ ತೆಗೆದುಕೊಂಡಿರುವ ಚೀನಾ, ಈ ಸಂಬಂಧ ಕಠಿಣ ನಿರ್ಬಂಧವೊಂದನ್ನು ತಂದಿದೆ.
ವಾರದಲ್ಲಿ ಮೂರು ಗಂಟೆಗಿಂತ ಹೆಚ್ಚಿನ ಅವಧಿಗೆ ಆನ್ಲೈನ್ ಗೇಮ್ ಆಡುವಂತಿಲ್ಲ ಎಂಬ ನಿಯಮವನ್ನು ತಂದಿರುವ ಚೀನಾ, ಸೆಪ್ಟೆಂಬರ್ 1ರಿಂದ ಶುಕ್ರವಾರ, ವಾರಾಂತ್ಯಗಳು ಹಾಗೂ ಸಾರ್ವಜನಿಕ ರಜಾ ದಿನಗಳ ಸಂದರ್ಭ ರಾತ್ರಿ 8-9 ಗಂಟೆ ನಡುವೆ ಮಾತ್ರವೇ ಆಟವಾಡಲು ಅನುಮತಿ ಕೊಟ್ಟಿದೆ.
ಪುಟ್ಟ ಮಕ್ಕಳಿಗೆ ಗೇಮ್ ಚಟ ಅಂಟಿಸಿ ಹಣ ಕಿತ್ತ ವಂಚಕರು
ಚೀನೀ ಸರ್ಕಾರದ ಈ ನಡೆಯಿಂದಾಗಿ ಟೆನ್ಸೆಂಟ್, ನೆಟ್ಈಸ್ನಂಥ ಆನ್ಲೈನ್ ಗೇಮಿಂಗ್ ದಿಗ್ಗಜರಿಗೆ ತಲೆನೋವು ಆರಂಭಗೊಂಡಿದೆ. ಹಾಂಕಾಂಗ್ ಶೇರು ಮಾರುಕಟ್ಟೆಯಲ್ಲಿ ಟೆನ್ಸೆಂಟ್ನ ಶೇರುಗಳ ಮೌಲ್ಯದಲ್ಲಿ 0.6% ಕುಸಿತ ಕಂಡರೆ, ನೆಟ್ಈಸ್ನ ಶೇರು ಮೌಲ್ಯದಲ್ಲಿ 9% ಕುಸಿತ ದಾಖಲಾಗಿದೆ.
2019ರಲ್ಲಿ ಮಕ್ಕಳಿಗೆ ಪ್ರತಿನಿತ್ಯ ಒಂದೂವರೆ ಗಂಟೆ ಆನ್ಲೈನ್ ಗೇಮ್ ಆಡಲು ಅನುಮತಿ ನೀಡಿದ್ದ ಚೀನಾ ಇದೀಗ ವಾರದಲ್ಲಿ ಮೂರು ಗಂಟೆಗಳ ಮಟ್ಟಿಗೆ ಮಾತ್ರವೇ ಆಡಲು ಅವಕಾಶ ಕೊಟ್ಟಿದೆ.