alex Certify ಒಂದಲ್ಲ, ಎರಡಲ್ಲ, ಮೂರು ! ವೈರಲ್ ಆಯ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್ ಹೊಸ ವಿಶ್ವ ದಾಖಲೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಲ್ಲ, ಎರಡಲ್ಲ, ಮೂರು ! ವೈರಲ್ ಆಯ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್ ಹೊಸ ವಿಶ್ವ ದಾಖಲೆ ವಿಡಿಯೋ

ಒಂದಲ್ಲ, ಎರಡಲ್ಲ, ಮೂರು ! ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಪುರುಷರ ಜಾವೆಲಿನ್ ಥ್ರೋ(ಎಫ್ 64) ಸ್ಪರ್ಧೆಯಲ್ಲಿ ಭಾರತದ ಸುಮಿತ್ ಆಂಟಿಲ್ ಮೇಲುಗೈ ಸಾಧಿಸಿದ್ದು, ಚಿನ್ನದ ಪದಕ ಪಡೆಯಲು ಮೂರು ಬಾರಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕಪ್ಪು ಶಾರ್ಟ್ಸ್ ಮತ್ತು ಕಿತ್ತಳೆ ಬಣ್ಣದ ಜರ್ಸಿಯನ್ನು ಧರಿಸಿದ್ದ ಸುಮಿತ್ ತಮ್ಮ ಐದನೇ ಎಸೆತದಲ್ಲಿ 68.55 ಮೀಟರ್ ಎಸೆಯುವ ಮೂಲಕ ಎಲ್ಲರ ಹುಬ್ಬೇರಿಸಿದರು. ಅದು ಚಿನ್ನದ ಪದಕ ತಂದುಕೊಟ್ಟಿದೆ. ಅವರ ಆರನೇ ಮತ್ತು ಅಂತಿಮ ಎಸೆತದ ನಂತರ, ಅವರು ಭಾರತೀಯ ಧ್ವಜದೊಂದಿಗೆ ಸಂಭ್ರಮಾಚರಿಸಿ ವಿಶ್ವ ದಾಖಲೆಯ ಅಧಿಕೃತ ದೃಢೀಕರಣದೊಂದಿಗೆ ಪೋಸ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಸಾಧನೆ ಮಾಡಿದ ಸುಮಿತ್ ಅವರನ್ನು ಅಭಿನಂದಿಸಿದ್ದಾರೆ. ನಮ್ಮ ಕ್ರೀಡಾಪಟುಗಳು #ಪ್ಯಾರಾಲಿಂಪಿಕ್ಸ್‌ ನಲ್ಲಿ ಮಿಂಚುತ್ತಿದ್ದಾರೆ ಕುಸ್ತಿಪಟು-ಜಾವೆಲಿನ್ ಎಸೆತಗಾರ ಈಗ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತದ ಎರಡನೇ ಚಿನ್ನವನ್ನು ಮುಡಿಗೇರಿಸಿಕೊಂಡರು, ಪುರುಷರ ಎಫ್ 64 ವರ್ಗದ ವಿಶ್ವದಾಖಲೆಯನ್ನು ಹಲವಾರು ಬಾರಿ ಭರ್ಜರಿ ಆಟವಾಡಿ ಭರ್ಜರಿ ಪ್ರದರ್ಶನ ನೀಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಆಶ್ಚರ್ಯವೆಂದರೆ ವಿಜಯದ ನಂತರ, ಸುಮಿತ್ ಆಂಟಿಲ್ ಇದು ಅತ್ಯುತ್ತಮವಲ್ಲ ಎಂದು ಹೇಳಿದ್ದಾರೆ. ಚಿನ್ನ ಗೆದ್ದಾಗ ಮತ್ತು 68.55 ಮೀಟರ್‌ಗಳ ವಿಶ್ವದಾಖಲೆಯನ್ನು ಸ್ಥಾಪಿಸಿದಾಗ, ಅವರು ಮಾತನಾಡಿ, ಇದು ನನ್ನ ಮೊದಲ ಪ್ಯಾರಾಲಿಂಪಿಕ್ಸ್ ಆಗಿದ್ದು, ಅದ್ಭುತವಾದ ಸ್ಪರ್ಧಿಗಳು ಇದ್ದ ಕಾರಣ ನಾನು ಸ್ವಲ್ಪ ಆತಂಕಕ್ಕೊಳಗಾಗಿದ್ದೆ. ನಾನು 70 ಮೀಟರ್ ಪ್ಲಸ್ ಥ್ರೋಗೆ ಆಶಿಸುತ್ತಿದ್ದೆ, ಬಹುಶಃ ನಾನು 75 ಮೀ ಮಾಡಬಹುದು. ಇದು ನನ್ನ ಅತ್ಯುತ್ತಮವಲ್ಲ, ವಿಶ್ವ ದಾಖಲೆಯನ್ನು ಮುರಿದಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ತರಬೇತಿಯಲ್ಲಿ ನಾನು 71 ಮೀ, 72 ಮೀ, ಹಲವು ಬಾರಿ ಎಸೆದಿದ್ದೇನೆ. ಈ ಸ್ಪರ್ಧೆಯಲ್ಲಿ ಏನಾಯಿತು ಎಂದು ನನಗೆ ಗೊತ್ತಿಲ್ಲ. ಒಂದು ವಿಷಯ ಖಚಿತವಾಗಿ ಹೇಳುತ್ತೇನೆ. ಭವಿಷ್ಯದಲ್ಲಿ ನಾನು ಇನ್ನೂ ಉತ್ತಮವಾಗಿ ಎಸೆದು ಸಾಧನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...