alex Certify ಅಕ್ರಮ ಸಂಬಂಧ ಶಂಕೆ, ಪತಿಗೆ ಪತ್ನಿ ನೀಡಿದ್ಲು ಇಂಥ ಶಿಕ್ಷೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಶಂಕೆ, ಪತಿಗೆ ಪತ್ನಿ ನೀಡಿದ್ಲು ಇಂಥ ಶಿಕ್ಷೆ….!

ಉಕ್ರೇನ್ ನಲ್ಲಿ ಪತ್ನಿಯೊಬ್ಬಳು ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ ಕೆಲಸ ದಂಗಾಗಿಸುತ್ತದೆ.

ಪತಿ ಮೋಸ ಮಾಡುತ್ತಿದ್ದಾನೆಂಬ ಕಾರಣಕ್ಕೆ ಪತ್ನಿ ಆತನಿಗೆ ಪಾಠ ಕಲಿಸಲು ಮುಂದಾಗಿದ್ದಾಳೆ. ಇದ್ರಿಂದ ಸಂಕಷ್ಟಕ್ಕೆ ಸಿಲುಕಿದ ಪತಿ ಪ್ರಾಣ ಉಳಿಸಲು ವೈದ್ಯರು ಸುಸ್ತಾಗಿದ್ದಾರೆ.

ಉಕ್ರೇನ್‌ನ ಜಪೋರೋಜಿಯಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬಳಿಗೆ, ಗಂಡನ ಮೇಲೆ ಅನುಮಾನ ಬಂದಿದೆ. ತನ್ನ ಗಂಡ ಬೇರೆ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದಾನೆಂದು ಭಾವಿಸಿದ್ದಾಳೆ.

ಪತಿ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಗಂಡನ ಖಾಸಗಿ ಭಾಗಕ್ಕೆ ಲೋಹದ ನಟ್ ಹಾಕಿದ್ದಾಳೆ. ಪತಿ ತಕ್ಷಣ ಆಸ್ಪತ್ರೆಗೆ ಹೋಗಿದ್ದಾನೆ. ಇದನ್ನು ತೆಗೆಯೋದು ಹೇಗೆ ಎಂಬುದು ವೈದ್ಯರಿಗೂ ತಿಳಿಯಲಿಲ್ಲ.

ಮೊದಲು ಸೂಪ್ ಬಳಸಿ, ತೆಗೆಯಲು ಮುಂದಾಗಿದ್ದಾರೆ. ಆದ್ರೆ ಅದು ಸಾಧ್ಯವಾಗದ ಕಾರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ವೈದ್ಯರಿಗೆ ಆಂಗಲ್ ಗ್ರೈಂಡರ್‌ಗಳಂತಹ ವಿಶೇಷ ಸಾಧನ ಬಳಸಬೇಕಾಯ್ತು. ವ್ಯಕ್ತಿ ಅನೇಕ ದಿನಗಳ ಕಾಲ ಖಾಸಗಿ ಅಂಗದಲ್ಲಿ ನೋವು ಅನುಭವಿಸುತ್ತಿದ್ದ ಎನ್ನಲಾಗಿದೆ.

ವಿಯೆಟ್ನಾಂನಲ್ಲಿ ಇದೇ ರೀತಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಪತಿಯ ಖಾಸಗಿ ಅಂಗ ಕತ್ತರಿಸಿದ್ದಾಳೆ. ನಂತ್ರ ಕತ್ತರಿಸಿದ ಖಾಸಗಿ ಅಂಗದ ಜೊತೆ ಆಸ್ಪತ್ರೆಗೆ ಬಂದಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ವ್ಯಕ್ತಿ ನೆಮ್ಮದಿಯ ನಿಟ್ಟಿಸುರಿ ಬಿಟ್ಟಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...